ಬೀಜಿಂಗ್ (ಪಿಟಿಐ): ಪರಸ್ಪರ ಅಪನಂಬಿಕೆ ಹೋಗಲಾಡಿಸಲು ಹಾಗೂ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಒತ್ತು ನೀಡುವ ಉದ್ದೇಶದಿಂದ ಭಾರತದ ಮಾಹಿತಿ ತಂತ್ರಜ್ಞಾನ ಮತ್ತು ಔಷಧ ಕಂಪೆನಿಗಳಿಗೆ ಚೀನಾ ತನ್ನ ಮಾರು ಕಟ್ಟೆಯನ್ನು ಮುಕ್ತವಾಗಿಡ ಬೇಕು ಎಂದು ಚಿಂತಕರು ಸಲಹೆ ಮಾಡಿದ್ದಾರೆ.
ಚೀನಾದ ಇಂತಹ ಕ್ರಮದಿಂದ ಭಾರತದ ಜತೆಗಿನ ಅಪನಂಬಿಕೆಯನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ. ಅಮೆರಿಕದೊಂದಿಗೆ ಭಾರತ ಅನ್ಯೋನ್ಯವಾಗಿದ್ದರೂ ಸಹ, ಚೀನಾ ಮಾರುಕಟ್ಟೆ ಸಹ ಪ್ರಮುಖವಾಗಿದೆ.
ಈ ನಿಟ್ಟಿನಲ್ಲಿ ಚೀನಾ ಗಂಭೀರವಾಗಿ ಚಿಂತನೆ ನಡೆಸುವ ಅಗತ್ಯ ಇದೆ ಎಂದು ಸರ್ಕಾರಿ ಸ್ವಾಮ್ಯದ ಶಾಂಘೈ ಇನ್‌ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಷನಲ್ ಸ್ಟಡೀಸ್‌ನ ತಜ್ಞರು ತಮ್ಮ ಲೇಖನದಲ್ಲಿ ಅಭಿಪ್ರಾಯ ವ್ಯಕ್ತಪಡಿ ಸಿದ್ದಾರೆ. ಉಭಯತ್ರರ ಸಂಬಂಧದಲ್ಲಿ ಕೆಲವು ಕ್ಲಿಷ್ಟಕರ ಸನ್ನಿವೇಶಗಳು ಇವೆ.
ಇಂತಹ ಸನ್ನಿವೇಶವನ್ನು ತಿಳಿಗೊಳಿಸುವ ಸಲುವಾಗಿ ಎರಡೂ ಜಾಗತಿಕ ಶಕ್ತಿಗಳು (ಚೀನಾ, ಭಾರತ) ಜಾಗತಿಕ ಸಮಾನ ಆಸಕ್ತಿಗಳಿಗೆ ಒತ್ತು ನೀಡಬೇಕು. ಆ ಮೂಲಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಲು ಅನುಕೂಲವಾಗಲಿದೆ ಎಂದಿದ್ದಾರೆ.
ಅಮೆರಿಕದೊಂದಿಗೆ ನಿಕಟವಾಗಿದ್ದರೂ ಸಹ, ಚೀನಾದೊಂದಿಗಿನ ತನ್ನ ತಂತ್ರಗಾರಿಕೆಯನ್ನು ಬಿಟ್ಟುಕೊಟ್ಟಿಲ್ಲ ಎಂದು ಸರ್ಕಾರಿ ಸ್ವಾಮ್ಯದ `ಗ್ಲೋಬಲ್ ಟೈಮ್ಸ~ನಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಭಾರತದ ಮಾಹಿತಿ ತಂತ್ರಜ್ಞಾನ ಮತ್ತು ಔಷಧ ಕಂಪೆನಿಗಳ ಮಾರುಕಟ್ಟೆಗೆ ಚೀನಾ ಪ್ರಶಸ್ತವಾಗಿದ್ದು, ಈ ನಿಟ್ಟಿನಲ್ಲಿ ಚೀನಾ ಸಹ ಕೊಡುಕೊಳ್ಳುವ ನೀತಿಯನ್ನು ಅನುಸರಿಸಬೇಕು ಎನ್ನುವ ಸಲಹೆಯನ್ನೂ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.