ADVERTISEMENT

ಭಾರತಕ್ಕೆ ಪಾಕ್ ಆಯೋಗ

​ಪ್ರಜಾವಾಣಿ ವಾರ್ತೆ
Published 20 ಜನವರಿ 2012, 19:35 IST
Last Updated 20 ಜನವರಿ 2012, 19:35 IST

ಇಸ್ಲಾಮಾಬಾದ್ (ಪಿಟಿಐ): ಮುಂಬೈನಲ್ಲಿ 2008ರಲ್ಲಿ ನಡೆದ ದಾಳಿಯ ತನಿಖಾ ಅಧಿಕಾರಿಗಳನ್ನು ಸಂದರ್ಶಿಸುವ ಸಲುವಾಗಿ ಪಾಕಿಸ್ತಾನದ ನ್ಯಾಯಾಂಗ ಆಯೋಗ ಫೆಬ್ರುವರಿ 3ರಿಂದ ಭಾರತಕ್ಕೆ ನಾಲ್ಕು ದಿನಗಳ ಭೇಟಿ ನೀಡಲಿದೆ ಎಂದು ಒಳಾಡಳಿತ ಸಚಿವ ರೆಹಮಾನ್ ಮಲಿಕ್ ತಿಳಿಸಿದ್ದಾರೆ.

ನಿಯೋಗ ಯಾವ ಅಧಿಕಾರಿಗಳನ್ನು ಒಳಗೊಳ್ಳಬೇಕು ಎಂಬುದರ ಪರಿಶೀಲನೆ ನಡೆಸಿ, ಭಾರತದ ಹೈಕಮಿಷನರ್ ಶರತ್ ಸಭರ್‌ವಾಲ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಲಿಕ್ ಭೇಟಿಯ ದಿನಾಂಕವನ್ನು ಘೋಷಿಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಫೆಬ್ರುವರಿ ತಿಂಗಳ ಆರಂಭದಲ್ಲಿ ಆಯೋಗ ನವದೆಹಲಿಗೆ ಭೇಟಿ ನೀಡಿದರೆ ಉತ್ತಮ ಎಂದು ಭಾರತ ಈ ಮೊದಲು ಪಾಕಿಸ್ತಾನಕ್ಕೆ ತಿಳಿಸಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT