ADVERTISEMENT

ಭಾರತದಿಂದ ಬೇಜವಾಬ್ದಾರಿಯ ಆರೋಪ ಎಂದ ಪಾಕಿಸ್ತಾನ

ಪಿಟಿಐ
Published 19 ಸೆಪ್ಟೆಂಬರ್ 2016, 8:42 IST
Last Updated 19 ಸೆಪ್ಟೆಂಬರ್ 2016, 8:42 IST
ಭಾರತದಿಂದ ಬೇಜವಾಬ್ದಾರಿಯ ಆರೋಪ ಎಂದ ಪಾಕಿಸ್ತಾನ
ಭಾರತದಿಂದ ಬೇಜವಾಬ್ದಾರಿಯ ಆರೋಪ ಎಂದ ಪಾಕಿಸ್ತಾನ   

ಇಸ್ಲಾಮಾಬಾದ್‌: ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಭಾನುವಾರ ನಡೆದ ಉಗ್ರರ ದಾಳಿ ಸಂಬಂಧ ಭಾರತವು ಆಧಾರ ರಹಿತ ಮತ್ತು ಬೇಜವಾಬ್ದಾರಿಯಾಗಿ ಆರೋಪ ಮಾಡುತ್ತಿದೆ ಎಂದು ಪಾಕಿಸ್ತಾನ ದೂರಿದೆ.

ಉಗ್ರರ ದಾಳಿಯ ಬಳಿಕ ಭಾರತದ ಗೃಹ ಸಚಿವ ರಾಜನಾಥ್‌ ಸಿಂಗ್‌, ಪಾಕಿಸ್ತಾನ ಭಯೋತ್ಪಾದಕ ರಾಷ್ಟ್ರ ಎಂದು ನೇರ ಆರೋಪ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ನಫೀಜ್‌ ಜಕಾರಿಯ, ‘ಭಾರತ ಆಧಾರ ರಹಿತ ಆರೋಪ ಮಾಡುತ್ತಿದೆ. ತನ್ನ ಆರೋಪಕ್ಕೆ ತಕ್ಕ ಸಾಕ್ಷ್ಯಾಧಾರ ಒದಗಿಸಲು ಭಾರತ ವಿಫಲವಾಗಿದೆ’ ಎಂದಿದ್ದಾರೆ.

ADVERTISEMENT

‘ಪ್ರತಿ ಬಾರಿ ಭಯೋತ್ಪಾದಕ ದಾಳಿ ನಡೆದ ತಕ್ಷಣ ಪಾಕಿಸ್ತಾನದ ಮೇಲೆ ಆರೋಪ ಹೊರಿಸುವುದು ಭಾರತದ ಅಭ್ಯಾಸವಾಗಿದೆ. ಆಕ್ರಮಿತ ಕಾಶ್ಮೀರದ ವಿಚಾರದಲ್ಲಿ ವಿಶ್ವ ಸಮುದಾಯದ ದಿಕ್ಕು ತಪ್ಪಿಸಲು ಭಾರತ ಭಿನ್ನಭಿನ್ನ ತಂತ್ರಗಳನ್ನು ಅನುಸರಿಸುತ್ತಿದೆ’ ಎಂದು ಜಕಾರಿಯ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.