ADVERTISEMENT

ಭಾರತೀಯ ಪ್ರವಾಸಿಗರ ಕೊಡುಗೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2012, 19:35 IST
Last Updated 20 ಜನವರಿ 2012, 19:35 IST

ವಾಷಿಂಗ್ಟನ್ (ಪಿಟಿಐ): ಕಳೆದ ವರ್ಷ ಅಮೆರಿಕಕ್ಕೆ ಪ್ರವಾಸ ಬಂದಿದ್ದ ಭಾರತೀಯರು ತಲಾ ಕನಿಷ್ಠ ಎರಡು ಲಕ್ಷ ರೂಪಾಯಿಗೂ ಹೆಚ್ಚು ಹಣ ವ್ಯಯಿಸಿದ್ದು, ಈ ಮೂಲಕ ದೇಶದ ಆರ್ಥಿಕತೆಗೆ 2.86 ಶತಕೋಟಿ ಡಾಲರ್‌ನಷ್ಟು ಬೃಹತ್ ಮೊತ್ತವನ್ನು ಕೊಡುಗೆಯಾಗಿ ನೀಡಿದ್ದಾರೆ.

6.51 ಲಕ್ಷಕ್ಕೂ ಹೆಚ್ಚು ಭಾರತೀಯರು ಇಲ್ಲಿಗೆ ಪ್ರವಾಸ ಕೈಗೊಂಡಿದ್ದು, ಈ ಪ್ರಮಾಣ 2003ಕ್ಕೆ ಹೋಲಿಸಿದರೆ ಶೇ 139ರಷ್ಟು ಹೆಚ್ಚು ಎಂದು ವಾಣಿಜ್ಯ ಸಚಿವಾಲಯದ ಅಂತರ ರಾಷ್ಟ್ರೀಯ ವ್ಯವಹಾರ ಆಡಳಿತ ಘಟಕದ ಅಂಕಿಅಂಶ ತಿಳಿಸಿದೆ.

ಭಾರತ, ಚೀನಾ ಮತ್ತು ಬ್ರೆಜಿಲ್‌ನ ಪ್ರವಾಸಿಗರು 2010ರಲ್ಲಿ ಒಟ್ಟಾರೆ ಸುಮಾರು 15 ಶತಕೋಟಿ ಡಾಲರ್‌ನಷ್ಟು ಹಣ ವ್ಯಯಿಸಿರುವುದರ ಜೊತೆಗೆ ಸಾವಿರಾರು ಉದ್ಯೋಗ ಸೃಷ್ಟಿಗೆ ಕಾರಣರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವಂತೆ ಕರೆ ನೀಡಿರುವ ಅಧ್ಯಕ್ಷ ಬರಾಕ್ ಒಬಾಮ, ವಿಶ್ವ ಪ್ರವಾಸೋದ್ಯಮ ಭೂಪಟದಲ್ಲಿ ಮೊದಲ ಸ್ಥಾನ ಉಳಿಸಿಕೊಳ್ಳುವ ದೇಶದ ಗುರಿಯನ್ನು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.