ADVERTISEMENT

ಭಾರತೀಯ ಸಿಬ್ಬಂದಿ ಇದ್ದ ಹಡಗು ಅಪಹರಣ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 19:45 IST
Last Updated 17 ಜುಲೈ 2013, 19:45 IST

ಅಬುಜಾ (ಪಿಟಿಐ/ಐಎಎನ್‌ಎಸ್): ಭಾರತ ಮೂಲದ ಸುಮಾರು 20ಕ್ಕೂ ಹೆಚ್ಚು ಸಿಬ್ಬಂದಿ ಇದ್ದ ಟರ್ಕಿಯ ತೈಲ ಮತ್ತು ರಾಸಾಯನಿಕ ಸರಕು ಸಾಗಣೆ ಹಡಗನ್ನು ಪಶ್ಚಿಮ ಆಫ್ರಿಕಾದ ಗ್ಯಾಬನ್ ಕಡಲು ತೀರದಿಂದ ಅಪಹರಿಸಲಾಗಿದೆ.

15ಕ್ಕೂ ಹೆಚ್ಚು ಜನರಿದ್ದ ಕಡಲ್ಗಳ್ಳರ ತಂಡ ಭಾನುವಾರ ತಡರಾತ್ರಿ ಜೆಂಟಿಲ್ ಬಂದರಿನಿಂದ ಹೊರಟ `ಎಂವಿ ಕಾಟನ್' ಹೆಸರಿನ ಹಡಗು ಮತ್ತು ಅದರ ಸಿಬ್ಬಂದಿ ಯನ್ನು ಅಪಹರಿಸಿದ್ದಾರೆ. ಅಪಹರಣ ಕಾರರು ಹಡಗನ್ನು ನೈಜೀರಿಯಾದತ್ತ ಕೊಂಡೊಯ್ಯುತ್ತಿರುವುದನ್ನು ಉಪಗ್ರ ಹದ ಮೂಲಕ ಪತ್ತೆ ಹಚ್ಚಲಾಗಿದೆ. ನಂತರ ಪ್ರಯಾಣದ ದಿಕ್ಕನ್ನು ಬದ ಲಿಸಿರುವ ಹಡಗು ಐವರಿ ಕೋಸ್ಟ್‌ನತ್ತ ಹೊರಟಿದೆ ಎಂದು ತಿಳಿದು ಬಂದಿದೆ.

ಹಡಗಿನ ಸಿಬ್ಬಂದಿ ಜೊತೆ ಸಂಸ್ಥೆ  ಸಂಪರ್ಕ ಕಳೆದುಕೊಂಡಿದೆ.  ಕ್ಯಾಪ್ಟನ್ ಶಿಶಿರ್ ವಾಹಿ (54) ಸೇರಿದಂತೆ ಭಾರತ ಮೂಲದ ಒಟ್ಟು 24 ಸಿಬ್ಬಂದಿ ಈ ಹಡಗಿನಲ್ಲಿದ್ದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.