ADVERTISEMENT

ಭಾರತ- ಪಾಕ್ ವಿಶ್ವಾಸ ವೃದ್ಧಿಗೆ ವಕೀಲರ ಮಹತ್ವದ ಪಾತ್ರ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ಭಾರತ- ಪಾಕಿಸ್ತಾನಗಳ ನಡುವೆ ಪರಸ್ಪರ ನಂಬಿಕೆ, ಸಾಮರಸ್ಯ ಮೂಡಿಸುವಂತಹ ಶಾಂತಿಯುತ ಮಾತುಕತೆಗೆ ಪೂರಕವಾದ ವಾತಾವರಣ ಸೃಷ್ಟಿಸಲು ಉಭಯ ರಾಷ್ಟ್ರಗಳ  ವಕೀಲರು ಮುಂದಾಗಬೇಕು ಎಂದು ಪಾಕಿಸ್ತಾನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ಸಲಹೆ ನೀಡಿದರು.

ಈ ರಾಷ್ಟ್ರಗಳು ಅಸ್ತಿತ್ವಕ್ಕೆ ಬಂದಾಗಿನಿಂದ ಹಿಡಿದು ಈತನಕ ಅನೇಕ ಬಿಕ್ಕಟ್ಟುಗಳು ಉಭಯ ರಾಷ್ಟ್ರಗಳನ್ನು ಕಾಡುತ್ತಿವೆ. ಆದರೆ ಶಾಂತಿಯುತ ಸಂಧಾನದಿಂದ ಪರಿಹಾರ ಕಂಡುಕೊಳ್ಳಲಾಗದ ಯಾವ ಸಮಸ್ಯೆಯೂ ಜಗತ್ತಿನಲ್ಲಿ ಇಲ್ಲ ಎಂದು ಅವರು ಹೇಳಿದರು.

ಪಾಕಿಸ್ತಾನಕ್ಕೆ ಭೇಟಿ ನೀಡಿರುವ 100ಕ್ಕೂ ಹೆಚ್ಚು ಭಾರತೀಯ ವಕೀಲರ ನಿಯೋಗದೊಂದಿಗೆ ಸೋಮವಾರ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷ ಆದೀಶ್ ಅಗರ್‌ವಾಲ್ ಅವರ ನೇತೃತ್ವದಲ್ಲಿ ಭಾರತದ ವಕೀಲರ ನಿಯೋಗ ಭೇಟಿ ನೀಡಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.