ಟೋಕಿಯೊ (ಐಎಎನ್‌ಎಸ್): ಜಲ ಸಂಪನ್ಮೂಲಗಳ ಸಮರ್ಥ ಬಳಕೆ ಹಾಗೂ ನಿರ್ವಹಣೆಗಾಗಿ ಭಾರತ ಮತ್ತು ಸಿಂಗಪುರ ವಿಶ್ವಸಂಸ್ಥೆಯ 2014ರ ‘ಅತ್ಯುತ್ತಮ ಜೀವಜಲ ನಿರ್ವಹಣೆ’ ಪ್ರಶಸ್ತಿಗೆ ಭಾಜನವಾಗಿವೆ.
ಮಾರ್ಚ್ 22ರ ವಿಶ್ವ ಜಲ ದಿನಾಚರಣೆ ಸಂದರ್ಭದಲ್ಲಿ ಶುಕ್ರವಾರ ವಿಶ್ವಸಂಸ್ಥೆ ಈ ಪ್ರಶಸ್ತಿಯನ್ನು ಘೋಷಿಸಿದೆ.‘ಈ ಬಾರಿ ಪ್ರಶಸ್ತಿಗೆ ಭಾಜನರಾಗಿರುವ ಈ ಎರಡು ದೇಶಗಳು ಭವಿಷ್ಯದಲ್ಲಿ ನೀರಿನ ಸಂಪನ್ಮೂಲಗಳ ಸಮರ್ಥ ಬಳಕೆಗೆ ಅತ್ಯುತ್ತಮ ಉದಾಹರಣೆಗಳು’ ಎಂದು ವಿಶ್ವಸಂಸ್ಥೆಯ ಜಲ ವಿಭಾಗದ ಮೈಕೆಲ್ ಜರೌದ್ ಪ್ರಶಂಸೆ ಮಾಡಿದ್ದಾರೆ.
ಪ್ರತಿ ವರ್ಷವೂ ವಿಶ್ವ ಜಲ ದಿನಾಚರಣೆ ಪ್ರಯುಕ್ತ ವಿಶ್ವಸಂಸ್ಥೆ ನೀಡುವ ಜಲ ಪ್ರಶಸ್ತಿಯು ವಿಭಿನ್ನ ಉದ್ದೇಶವನ್ನು ಗುರಿಯಾಗಿರಿಸಿಕೊಂಡಿರುತ್ತದೆ. ಈ ಬಾರಿ ನೀರಿನ ಸಂಪನ್ಮೂಲದ ಸಮರ್ಥ ಹಾಗೂ ಸಮರ್ಪಕ ನಿರ್ವಹಣೆ ಬಗ್ಗೆ ವಿಷಯ ಕೇಂದ್ರಿತವಾಗಿತ್ತು. ಈ ಬಾರಿ ಪ್ರಶಸ್ತಿಗೆ ವಿವಿಧ ದೇಶಗಳಿಂದ ಒಟ್ಟು 34 ಅರ್ಜಿಗಳು ಬಂದಿದ್ದವು. ಅದರಲ್ಲಿ 9 ಅರ್ಜಿಗಳು ಏಷ್ಯಾದಿಂದ ಬಂದಿದ್ದವು ಎಂದು ವಿಶ್ವಸಂಸ್ಥೆಯ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.