ADVERTISEMENT

ಭೂಮಿಬೊಲ್‌ ವಿದಾಯಕ್ಕೆ ಸಿದ್ಧತೆ

ಪಿಟಿಐ
Published 26 ಅಕ್ಟೋಬರ್ 2017, 19:30 IST
Last Updated 26 ಅಕ್ಟೋಬರ್ 2017, 19:30 IST
ಬ್ಯಾಂಕಾಕ್‌ನಲ್ಲಿ ಥಾಯ್ಲೆಂಡ್‌ ದೊರೆ ಭೂಮಿಬೊಲ್‌ ಅದುಲ್ಯದೇಜ್‌ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು – ರಾಯಿಟರ್ಸ್‌ ಚಿತ್ರ
ಬ್ಯಾಂಕಾಕ್‌ನಲ್ಲಿ ಥಾಯ್ಲೆಂಡ್‌ ದೊರೆ ಭೂಮಿಬೊಲ್‌ ಅದುಲ್ಯದೇಜ್‌ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು – ರಾಯಿಟರ್ಸ್‌ ಚಿತ್ರ   

ಬ್ಯಾಂಕಾಕ್‌ : ಒಂದು ವರ್ಷದ ಬಳಿಕ ಥಾಯ್ಲೆಂಡ್‌ ದೊರೆ ಭೂಮಿಬೊಲ್‌ ಅದುಲ್ಯಾದೇಜ್‌ ಅವರ ಅಂತ್ಯಕ್ರಿಯೆ ನಡೆಸುವ ವಿಧಿವಿಧಾನಗಳು ಗುರುವಾರ ಆರಂಭಗೊಂಡಿದ್ದು, ಇಡೀ ದೇಶ ದುಃಖದಲ್ಲಿ ಮುಳುಗಿದೆ.

ಕಳೆದ ವರ್ಷ ಅಕ್ಟೋಬರ್‌ 13ರಂದು ಭೂಮಿಬೊಲ್‌ ಅದುಲ್ಯಾದೇಜ್‌ (88) ಸಾವಿಗೀಡಾಗಿದ್ದರು. ಬೌದ್ಧ ಸಂಪ್ರದಾಯದಂತೆ ಐದು ದಿನಗಳ ಕಾಲ ಅಂತ್ಯಕ್ರಿಯೆ ಪ್ರಕ್ರಿಯೆಗಳು ನೆರವೇರಲಿವೆ. ದೊರೆ ಮೃತಪಟ್ಟ ಬಳಿಕ ದೇಶದಲ್ಲಿ ಒಂದು ವರ್ಷ ಶೋಕಾಚರಣೆ ಘೋಷಿಸಲಾಗಿತ್ತು. ಅದು ಅಂತ್ಯಕ್ರಿಯೆಯೊಂದಿಗೆ ಮುಕ್ತಾಯವಾಗಲಿದೆ.

ಅಂತ್ಯಕ್ರಿಯೆಗೆ ಮುನ್ನ ದೊರೆಯ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ. ಎರಡು ಕಿಲೋ ಮೀಟರ್‌ ದೂರ ಸಾಗುವ ಮೆರವಣಿಗೆ ಪೂರ್ಣಗೊಳ್ಳಲು ಕನಿಷ್ಠ 3 ಗಂಟೆ ಬೇಕಾಗುತ್ತದೆ. ಈ ಮೆರವಣಿಗೆಯನ್ನು ಕಪ್ಪು ಬಟ್ಟೆ ಧರಿಸಿ ಸಾವಿರಾರು ಮಂದಿ ವೀಕ್ಷಿಸಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.