ADVERTISEMENT

ಭೂಮಿ ಕೆಂಪು ಗ್ರಹವಾದಾಗ!

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ನ್ಯೂಯಾರ್ಕ್‌ (ಐಎಎನ್‌ಎಸ್‌): ಒಂದು ಕ್ಷಣ ಯೋಚಿಸಿ ಭೂಮಿ ಮಂಗಳನಂತೆ ಕೆಂಪು ಗ್ರಹವಾ­ಗಿದ್ದರೆ...? ಇದು ಸಾಧ್ಯವೇ...?

ಹೌದು, ಪೃಥ್ವಿ ಕೂಡ ಅಂಗಾರಕನಂತೆ ಕೆಂಪಾಗಿರುವ ಚಿತ್ರಗಳನ್ನು ಸೆರೆಹಿಡಿದಿ­ರು­ವುದಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ  ನಾಸಾ ಹೇಳಿಕೊಂಡಿದೆ. ಹಲವು ಭಾಗಗಳನ್ನು ವಿವಿಧ ಭಂಗಿಗಳಲ್ಲಿ ಸೆರೆಹಿಡಿಯಲಾಗಿದ್ದು, ಇದು ಇಳೆ ನಸುಗೆಂಪು ಬಣ್ಣವಿರುವಂತೆ  ಪ್ರತಿಬಿಂಬಿಸಿದೆ.

ಭೂಮಿಯ ಮೇಲ್ಮೈ ಚಿತ್ರಗಳನ್ನು ನಾಸಾದ ‘ಮರ್ಕ್ಯುರಿ ಸರ್ಫೇಸ್ ಸ್ಪೇಸ್‌ ಎನ್‌ವಿರಾನ್ಮೆಂಟ್‌ ಜಿಯೊ­ಕೆಮಿಸ್ಟ್ರಿ ಆ್ಯಂಡ್‌ ರ್‍ಯಾಂಗಿಂಗ್‌– (ಮೆಸಿಂಜರ್‌)’  ಹೆಸರಿನ ಬಾಹ್ಯಾ­ಕಾಶ ನೌಕೆಯ 11 ಕ್ಯಾಮೆರಾಗಳು ವಿವಿಧ ಕೋನಗಳಲ್ಲಿ ಸೆರೆ­ಹಿಡಿದಿವೆ. ಈ ಚಿತ್ರವು ದಕ್ಷಿಣ ಅಮೆರಿಕ, ಉತ್ತರ ಅಮೆರಿಕ ಮತ್ತು ಆಫ್ರಿಕಾದ ಕೆಲವು ಫಲವತ್ತಾದ ಭೂ ಭಾಗಗಳಾಗಿವೆ.

ನಾಸಾ ಈ ಚಿತ್ರದ ಬಣ್ಣವನ್ನು ಕೊಂಚ ಮಾರ್ಪಡಿಸಿ ನಸುಗೆಂಪು ಬಣ್ಣ ಗಾಢ­ವಾಗಿ ಎದ್ದು ಕಾಣುವಂತೆ ಮಾಡಿದೆ. ಈ ಚಿತ್ರವು ಈ ಹಿಂದೆ ‘ಅಪೋಲೊ’ ಗಗನಯಾತ್ರಿಗಳು ಸೆರೆಹಿಡಿದಿದ್ದ ಭೂಮಿಯ ಮೇಲಿನ ನೀಲಿ ಬಣ್ಣದ ಅಮೃತಶಿಲೆಗಳ ಚಿತ್ರವನ್ನು ಹೋಲುತ್ತದೆ ಎಂದೂ ನಾಸಾದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.