ವಾಷಿಂಗ್ಟನ್ (ಐಎಎನ್‌ಎಸ್): ನಿಮ್ಮ ಹೆಸರು ಮಂಗಳ ಗ್ರಹಕ್ಕೆ ರವಾನಿಸುವ ಹಂಬಲವಿದೆಯೇ? ಹಾಗಿದ್ದರೆ ನಿಮಗಿದೊಂದು ಅವಕಾಶ ಇದೆ. ನಾಸಾ ಇದಕ್ಕಾಗಿ ಹೆಸರುಗಳನ್ನು ಆಹ್ವಾನಿಸಿದೆ. ಅಂದಹಾಗೆ ಹೆಸರುಗಳನ್ನು ದಾಖಲಿಸಲು ಇಂದೇ (ಸೆಪ್ಟೆಂಬರ್ 8) ಕಡೆದಿನ.
ಅಂಗಾರಕನ ಭೌತವಿಜ್ಞಾನದ ಅಧ್ಯಯನಕ್ಕಾಗಿ 2016ರ ಮಾರ್ಚ್‌ನಲ್ಲಿ ಇನ್‌ಸೈಟ್ ಎಂಬ ನೌಕೆಯನ್ನು ರವಾನಿಸಲಿದ್ದು, ನೀವು ಕಳುಹಿಸುವ ಹೆಸರುಗಳನ್ನು ಅದರಲ್ಲಿನ ಕಂಪ್ಯೂಟರ್‌ನಲ್ಲಿ ಅಳವಡಿಸುವುದಾಗಿ ನಾಸಾ ಹೇಳಿದೆ.
ಅಂದಹಾಗೆ ನಾಸಾ ಜನರ ಹೆಸರುಗಳನ್ನು ನಭಕ್ಕೆ ಕಳುಹಿಸುತ್ತಿರುವುದು ಇದು ಎರಡನೇ ಬಾರಿ. ಕಳೆದ ವರ್ಷವೂ ಇಂಥದ್ದೊಂದು ಆಹ್ವಾನವನ್ನು ನೀಡಿತ್ತು, ಪರಿಣಾಮವಾಗಿ 13.9 ಲಕ್ಷ ಜನರ ಹೆಸರುಗಳನ್ನು ಒರಿಯನ್ ನೌಕೆಯ ಮೂಲಕ ನಭಕ್ಕೆ ಕಳುಹಿಸಿತ್ತು.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.. http://mars.nasa.gov/participate/send-your-name/insight/
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.