ADVERTISEMENT

ಮಕ್ಕಳ ಮತಾಂತರ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 19:59 IST
Last Updated 20 ಜೂನ್ 2013, 19:59 IST

ಕ್ವಾಲಾಲಂಪುರ (ಪಿಟಿಐ): ತಾಯಿಯ ಅನುಮತಿ ಪಡೆಯದೇ ಇಬ್ಬರು ಹಿಂದೂ ಮಕ್ಕಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ ಘಟನೆ ಮಲೇಷ್ಯಾದಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ.

ಅಲ್ಲಿನ ವಕೀಲರ ಸಂಘ ಸಹ ಈ ಮತಾಂತರವನ್ನು ಏಕಪಕ್ಷೀಯವಾದದ್ದು ಎಂದು ಟೀಕಿಸಿದೆ. ಭಾರತೀಯ ಮೂಲದ ಎಸ್. ದೀಪಾ (29)ಎಂಬುವರು ಮಲೇಷ್ಯಾದ ಜೆಲೆಬು ಪ್ರದೇಶದಲ್ಲಿ ವಾಸವಾಗಿದ್ದಾರೆ. ಅವರ ಇಬ್ಬರು ಮಕ್ಕಳನ್ನು ಈಚೆಗೆ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗಿತ್ತು. ಆದರೆ, ಇದಕ್ಕೆ ಮಕ್ಕಳ ತಾಯಿ ದೀಪಾ ಅವರ ಅನುಮತಿ ಪಡೆದಿರಲಿಲ್ಲ.

16 ತಿಂಗಳ ಹಿಂದೆಯಷ್ಟೇ ದೀಪಾ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ. ದೀಪಾ ಪರಪುರುಷನೊಂದಿಗೆ ಸಂಬಂಧ ಹೊಂದಿದ್ದು, ಮಕ್ಕಳ ಕಾಳಜಿ ಮಾಡುತ್ತಿರಲಿಲ್ಲ ಎಂದು ದೀಪಾ ಅವರ ಪತಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.