ADVERTISEMENT

ಮಗುವಿನ ಕಿವಿಯೊಳಗೆ ಬೆಳೆದ ಸಸಿ!

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2013, 19:30 IST
Last Updated 1 ಡಿಸೆಂಬರ್ 2013, 19:30 IST

ಬೀಜಿಂಗ್ (ಪಿಟಿಐ): 16 ತಿಂಗಳ ಶಿಶುವಿನ ಕಿವಿಯಲ್ಲಿ ಸುಮಾರು 2ಸೆಂ.ಮೀ ನಷ್ಟು ಬೆಳೆದಿದ್ದ ಕಾಡುಸೇವಂತಿ ಹೂವಿನ ಸಸಿಯನ್ನು ಹೊರಗೆ ತೆಗೆಯುವಲ್ಲಿ ಚೀನಾದ ವೈದ್ಯರ ತಂಡ ಯಶಸ್ವಿಯಾಗಿದೆ.

ರಾನ್‌ರಾನ್‌ ಎಂಬ ಹೆಣ್ಣು ಮಗು ಕಳೆದ ನಾಲ್ಕು ತಿಂಗಳಿನಿಂದ ಕಿವಿ ನೋವಿನಿಂದ ಬಳಲುತ್ತಿತ್ತು. ಕಾಡುಸೇವಂತಿ ಬೀಜ ಎಡ ಕಿವಿಯೊಳಗೆ ಹೊಕ್ಕಿದ್ದು ಅಲ್ಲಿಯೇ ಬೆಳೆದು ದೊಡ್ಡದಾಗಿತ್ತು. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದಲ್ಲಿ ಬೇರುಗಳು ಮೆದುಳಿಗೆ ಸೇರಿಕೊಳ್ಳವ ಸಂಭವವಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.