ವಾಷಿಂಗ್ಟನ್ (ಪಿಟಿಐ): ಹಳೆಯ ಮಧುರ ಕ್ಷಣಗಳೆಲ್ಲ ನೆನಪಾಗಬೇಕೆ? ಹಾಗಿದ್ದರೆ, ಮೆದುಳಿನ ಕೋಶಗಳಿಗೆ (ನ್ಯೂರಾನ್‌ಗಳನ್ನು) ಒಂದಿಷ್ಟು ಪ್ರಚೋದನೆ ನೀಡಿ, ಸ್ಮೃತಿಪಟಲದಲ್ಲಿನ ನೆನಪುಗಳು ಹಾಗೆಯೇ ತೆರದುಕೊಳ್ಳುತ್ತವೆ!
ಹೌದು, ಬೇಡಿಕೆಯಿಟ್ಟು ನೆನಪುಗಳನ್ನು ಮರಳಿ ಪಡೆಯುವ ತಂತ್ರಜ್ಞಾನವನ್ನು ಇಲ್ಲಿನ ಎಂಐಟಿ ವಿಜ್ಞಾನಿಗಳು ಸಂಶೋಧಿಸಿದ್ದಾರೆ.
ಈ ತಂತ್ರಜ್ಞಾನಕ್ಕೆ ಆಪ್ಟೋಜೆನೆಟಿಕ್ಸ್ ಎನ್ನುತ್ತಾರೆ. ಇದೊಂದು ಶಕ್ತಿಯುತ ಮಾಧ್ಯಮ. ಇದರಿಂದ ಮೆದುಳಿನ ನಿಗದಿತ ಕೋಶದೊಳಗೆ ಹುದುಗಿರುವ ನೆನಪುಗಳನ್ನು ಮರಳಿ ಪಡೆಯುದಾಗಿದೆ ಎನ್ನುತ್ತಾರೆ ವಿಜ್ಞಾನಿಗಳು.
`ಮಧುರ ನೆನಪುಗಳನ್ನು ಮರುಕಳಿಸುವ~ ಈ ಸಂಶೋಧನೆಯನ್ನು ಇಲಿಗಳ ಮೇಲೆ ಪ್ರಯೋಗಿಸಲಾಗಿದ್ದು, ಫಲಿತಾಂಶವನ್ನು `ನೇಚರ್~ನಲ್ಲಿ ಪ್ರಕಟಿಸಲಾಗಿದೆ.
ಲೇಖನಕ್ಕೆ ಪ್ರತಿಕ್ರಿಯೆಯಾಗಿ `ನೆನಪುಗಳು ಹೇಗೆ ಕೋಶಗಳಲ್ಲಿ ಸಂರಕ್ಷಣೆಯಾಗಿರುತ್ತವೆ ಮತ್ತು ಅವುಗಳನ್ನು ಮರಳಿ ಪಡೆಯುವುದಾದರೂ ಹೇಗೆ. ನೆನಪುಗಳು ಅಳಿಸಿ ಹೋಗುವುದಾದರೂ ಹೇಗೆ?~ ಎಂಬಂತಹ ಪ್ರಶ್ನೆಗಳನ್ನು ವಿಜ್ಞಾನಿಗಳು ಮುಂದಿಟ್ಟಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಲೇಖಕ ಸುಸುಮು ತೊನೆಗವಾ, `ಸಸ್ತನಿಗಳ ಮೆದುಳಿನ ಕೋಶವು ಹೆಚ್ಚಿನ ಮಟ್ಟದಲ್ಲಿ ನೆನಪುಗಳನ್ನು ದಾಖಲಿಸಿಕೊಳ್ಳುತ್ತದೆ. ಇದನ್ನು ಆಧಾರವಾಗಿಟ್ಟುಕೊಂಡು ಈ ಸಂಶೋಧನೆ ನಡೆಸಲಾಗಿದೆ~ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.