ADVERTISEMENT

ಮಧ್ಯಪ್ರಾಚ್ಯ ಬಿಕ್ಕಟ್ಟು ಕ್ಷಿಪ್ರ ಪರಿಹಾರಕ್ಕೆ ಭಾರತ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 19:30 IST
Last Updated 13 ಮಾರ್ಚ್ 2012, 19:30 IST

ವಿಶ್ವಸಂಸ್ಥೆ (ಪಿಟಿಐ):  ಮಧ್ಯಪ್ರಾಚ್ಯದಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ಬಗ್ಗೆಕಳವಳ ವ್ಯಕ್ತಪಡಿಸಿರುವ ಭಾರತವು, ಇಸ್ರೇಲ್-ಪ್ಯಾಲೆಸ್ಟೈನ್ ಬಿಕ್ಕಟ್ಟಿಗೆ ತ್ವರಿತ ಪರಿಹಾರ ಹುಡುಕಬೇಕೆಂದು ಕರೆ ನೀಡಿದೆ.

ಮಧ್ಯಪ್ರಾಚ್ಯ ಪರಿಸ್ಥಿತಿ ಕುರಿತು ಸೋಮವಾರ ಬ್ರಿಟನ್‌ನ ಅಧ್ಯಕ್ಷತೆಯಲ್ಲಿ ನಡೆದ ಭದ್ರತಾ ಮಂಡಳಿಯ ಉನ್ನತ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆ ಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಹರದೀಪ್‌ಸಿಂಗ್ ಪುರಿ, `ಪ್ಯಾಲಸ್ಟೈ ನಿಯರು ತಮ್ಮನ್ನು ಜಾಗತಿಕ ಸಮು ದಾಯ ನಿರ್ಲಕ್ಷಿಸಿದಂತೆ ಭಾವಿಸು ವಂತಾಗಬಾರದು~ ಎಂದರು.

`ಇಸ್ರೇಲ್-ಪ್ಯಾಲೆಸ್ಟೈನ್ ಸಮಸ್ಯೆ ಸೇರಿದಂತೆ ಅರಬ್-ಇಸ್ರೇಲಿ ಬಿಕ್ಕಟ್ಟಿನ ಬಗ್ಗೆ ಯಾವುದೇ ಪರಿಹಾರ ನಿರ್ಣಯ ಕೈಗೊಳ್ಳದೆ, ಬಿಕ್ಕಟ್ಟಿನಲ್ಲಿರುವ ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾ ಬೆಳವಣಿಗೆಗಳಿಗೆ ಸೂಕ್ತವಾಗಿ ಸ್ಪಂದಿಸಲಾಗದು~ ಎಂದು ಅವರು ತಿಳಿಸಿದರು. `ಬಹುಕಾಲದಿಂದ ನೆನೆಗುದಿಯಲ್ಲಿರುವ ಈ ಬಿಕ್ಕಟ್ಟುಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಅಂತರರಾಷ್ಟ್ರೀಯ ಸಮುದಾಯ ಯೋಗ್ಯ ರೀತಿಯಲ್ಲಿ ಪ್ರಯತ್ನಿಸುವ ಅವಶ್ಯಕತೆ ಇದೆ~ ಎಂದ ಅವರು, `ಪ್ರಜಾಸತ್ತಾತ್ಮಕ ಮತ್ತು ರಾಜಕೀಯ ಸುಧಾರಣಾ ಕ್ರಮಗಳಿಂದ ಮಾತ್ರ ಸೂಕ್ತ ಪರಿಹಾರ ಸಾಧ್ಯ~ ಎಂದು ನುಡಿದರು.

ADVERTISEMENT

ಪ್ರತಿಯೊಂದು ಅರಬ್ ರಾಷ್ಟ್ರಗಳು ತಮ್ಮ ನೆಲದಲ್ಲಿ ಶಾಂತಿಯಿಂದ ಬದುಕಲು ಮತ್ತು ಸಹಕಾರ ಸಂಬಂಧಗಳನ್ನು ನಿರ್ಮಿಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದರು.

ಮತ್ತು ಈ ನಿಟ್ಟಿನಲ್ಲಿ ತ್ವರಿತಗತಿಯ ಮಹತ್ವಪೂರ್ಣ ಪುನರ್ವಸತಿ ಕ್ರಮಗಳನ್ನು ಕೈಗೊಳ್ಳ ~ ಎಂದು ಅವರು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.