ADVERTISEMENT

ಮನೆಯಲ್ಲಿ ಚಿನ್ನ, ಕೈಯಲ್ಲಿ ಗನ್ನು...!

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 19:30 IST
Last Updated 17 ಜನವರಿ 2012, 19:30 IST

ವಾಷಿಂಗ್ಟನ್(ಪಿಟಿಐ):ಜಾರ್ಜಿಯಾ ನಗರದಲ್ಲಿ ನೆಲೆಸಿರುವ ಭಾರತೀಯ ಮೂಲದ ಅಮೆರಿಕನ್ನರು ತಮ್ಮ ಜೀವನದಲ್ಲಿ ಹಿಂದೆಂದೂ ಹಿಡಿಯದ ಬಂದೂಕನ್ನು ಇದೀಗ ಹಿಡಿಯಲು ಹೊರಟಿದ್ದಾರೆ. ಗುರಿಯಿಟ್ಟು ಗುಂಡು ಹಾರಿಸುವುದನ್ನು ಕಲಿಯಲು ವಾರಾಂತ್ಯದ ರಜೆಯ ದಿನಗಳನ್ನು ಮೀಸಲಿಡುತ್ತಿದ್ದಾರೆ.

ಏಕೆಂದರೆ ಇತ್ತೀಚಿನ ದಿನಗಳಲ್ಲಿ ಅವರ ಮನೆಗಳಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಸಮುದಾಯವು, ಆತ್ಮರಕ್ಷಣೆಗಾಗಿ ಶಸ್ತ್ರ ಹಿಡಿಯಲು ಮುಂದಾಗಿದೆ.

ಈ ಕಾರ್ಯದಲ್ಲಿ ಅವರೊಂದಿಗೆ ಕೈಜೋಡಿಸಿರುವ ಸ್ಥಳೀಯ ಪೊಲೀಸರು, ಬಂದೂಕು ತರಬೇತಿಗೆ ನೆರವಾಗುತ್ತಿದ್ದಾರೆ. ಮನೆಗಳಲ್ಲಿ ಚಿನ್ನ ಇಟ್ಟುಕೊಳ್ಳುವ ಭಾರತೀಯರ ಸಂಸ್ಕೃತಿಯೇ ಅವರಿಗೆ ಗಂಡಾಂತರ ತಂದೊಡ್ಡಿದೆ. ವರ್ಜೀನಿಯ, ನ್ಯೂಯಾರ್ಕ್ ಮುಂತಾದ ನಗರಗಳಲ್ಲಿ ನೆಲೆಸಿರುವ ಭಾರತೀಯರ ಮನೆಗಳಲ್ಲೂ ದರೋಡೆ ಪ್ರಕರಣ ವರದಿಯಾಗಿವೆ. ಆದರೂ ಸ್ವರಕ್ಷಣೆಗಾಗಿ ಬಂದೂಕು ತರಬೇತಿಗೆ ಮುಂದಾಗಿರುವುದು ಇದೇ ಮೊದಲು.

`ನಮ್ಮ ಕೆಲವು ಸ್ನೇಹಿತರು ದರೋಡೆಗೆ ಒಳಗಾಗಿರುವುದನ್ನು ಕಂಡಿದ್ದೇವೆ. ಮನೆಯಲ್ಲಿರುವಾಗ ನಾವು ಸಹ ಬಲಿಪಶುಗಳಾಗುವುದು ಬೇಕಿಲ್ಲ. ಹೀಗಾಗಿ ಬಂದೂಕು ತರಬೇತಿ ಪಡೆದುಕೊಳ್ಳುತ್ತಿದ್ದೇವೆ. ಈಗ ನಮ್ಮಲ್ಲಿ ಆತ್ಮವಿಶ್ವಾಸ ಬಂದಿದೆ~ ಎನ್ನುತ್ತಾರೆ ಆಶಿಶ್ ಧುಮೆ, ನಿವೆಲ್ ಬಿಲಿಮೋರಿಯ ಇತರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.