
ಪ್ರಜಾವಾಣಿ ವಾರ್ತೆಹ್ಯೂಸ್ಟನ್ (ಪಿಟಿಐ): ಸಂಶೋಧಕರ ತಂಡವೊಂದು ಅಭಿವೃದ್ಧಿಪಡಿಸಿರುವ ಮಲೇರಿಯಾ ಔಷಧಿಯನ್ನು ಭಾರತದಲ್ಲಿ ವಯಸ್ಕರ ಚಿಕಿತ್ಸೆಗೆ ಬಳಸಲು ಅನುಮತಿ ನೀಡಲಾಗಿದೆ.
ನೆಬರಸ್ಕಾ ವೈದ್ಯಕೀಯ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿರುವ `ಸಿನ್‌ರಿಯನ್~ ಔಷಧಿಯು ಮಲೇರಿಯಾ ರೋಗ ನಿಯಂತ್ರಣಕ್ಕೆ ತೀವ್ರ ಪರಿಣಾಮಕಾರಿ ಎಂದು ಹೇಳಲಾಗಿದೆ.
ಜಿನಿವಾ ಮೂಲದ ಸಂಸ್ಥೆಯೊಂದು ಮಲೇರಿಯಾ ಔಷಧಿ ಅಭಿವೃದ್ಧಿಗಾಗಿ 12 ದಶಲಕ್ಷ ಡಾಲರ್ ನೆರವನ್ನು ನೀಡಿದ್ದರಿಂದ ಕಳೆದ 25 ವರ್ಷಗಳಿಂದ ಸಂಶೋಧನೆ ನಡೆಸಿ ಹೊಸ ಔಷಧಿಯನ್ನು ಅಭಿವೃದ್ಧಿಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.