ಪಟ್ಟಾಯಾ (ಪಿಟಿಐ): ಶನಿವಾರ ನಾಪತ್ತೆಯಾಗಿದ್ದ ಮಲೇಷಿಯಾ ಏರ್ ಲೈನ್ಸ್ ವಿಮಾನದ ಕುರಿತು ಕಾರ್ಯಾಚರಣೆ ಮುಂದುವರೆದಿದೆ.
ಈ ನಡುವೆ ನಕಲಿ ಪಾಸ್ ಪೋರ್ಟ್ ಬಳಸಿ ವಿಮಾನದಲ್ಲಿ ಪ್ರಯಾಣಿಸಿರುವ ಇಬ್ಬರು ಪ್ರಯಾಣಿಕರ ಬಗ್ಗೆಯೂ ವ್ಯಾಪಕ ತನಿಖೆ ನಡೆಸಲಾಗುತ್ತಿದೆ. ಆ ಇಬ್ಬರು ಪ್ರಯಾಣಿಕರು ಒಂದೇ ಕೇಂದ್ರದಲ್ಲಿ ಟಿಕೆಟ್ ಕಾಯ್ದಿರಿಸಿದ್ದು ಈ ಸಂಬಂಧ ಟಿಕೆಟ್ ನೀಡಿದವರವನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಮಲೇಷಿಯಾ ಸಾರಿಗೆ ಸಚಿವ ಹಿಮಾನ್ಷುದ್ದೀನ್ ಹುಸೇನ್ ’ಆ ಇಬ್ಬರು ಪ್ರಯಾಣಿಕರ ಗುರುತು ಪತ್ತೆಗಾಗಿ ಸಾಕಷ್ಟು ತನಿಖೆ ನಡೆಸಲಾಗುತ್ತಿದೆ. ತನಿಕಾಧಿಕಾರಿಗಳಿಗೆ ಸಿಸಿಟಿವಿಯಲ್ಲಿನ ವಿಡಿಯೋ ಮತ್ತು ಅಗತ್ಯ ದಾಖಲೆಗಳನ್ನು ನೀಡಲಾಗಿದೆ. ಕೆಲ ಉಗ್ರರು ಮತ್ತು ಅಪರಾಧಿಗಳು ಈ ರೀತಿಯಲ್ಲಿ ನಕಲಿ ಪಾಸ್ ಪೋರ್ಟ್ ಬಳಸಿ ಪ್ರಯಾಣ ಮಾಡುತ್ತಿರುತ್ತಾರೆ ಎಂದು ಹೇಳಿದ್ದಾರೆ.
239 ಜನರಿದ್ದ ವಿಮಾನವು ನಾಪತ್ತೆಯಾಗಿ ನಾಲ್ಕು ದಿನಗಳಾದರೂ ಯಾವುದೇ ಸುಳಿವು ದೊರೆತಿಲ್ಲ. ವಿಯೆಟ್ನಾಂ ಸಮುದ್ರದಲ್ಲಿ ತೀವ್ರ ಶೋಧ ಮುಂದುವರೆದಿದೆ. 34 ವಿಮಾನಗಳು, 40 ಹಡಗುಗಳು ಸುಮಾರು 185 ಕೀ. ಮಿ ವ್ಯಾಪ್ತಿಯಲ್ಲಿ ಬಿರುಸಿನ ಹುಡುಕಾಟದಲ್ಲಿ ತೊಡಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.