ADVERTISEMENT

ಮಹಿಳಾ ಕೈದಿಯ ಮಗುವಿಗೆ ಎದೆಹಾಲುಣಿಸಿದ ಮಹಿಳಾ ಪೊಲೀಸ್‌: ಫೋಟೊ ವೈರಲ್‌

ಏಜೆನ್ಸೀಸ್
Published 29 ಸೆಪ್ಟೆಂಬರ್ 2017, 11:50 IST
Last Updated 29 ಸೆಪ್ಟೆಂಬರ್ 2017, 11:50 IST
ಪೊಲೀಸ್‌ ಅಧಿಕಾರಿ ಹಾವೋ ಲಿನಾ      –ಚಿತ್ರ ಕೋರ್ಟ್‌ ವೆಬ್‌ಸೈಟ್‌ನದ್ದು
ಪೊಲೀಸ್‌ ಅಧಿಕಾರಿ ಹಾವೋ ಲಿನಾ –ಚಿತ್ರ ಕೋರ್ಟ್‌ ವೆಬ್‌ಸೈಟ್‌ನದ್ದು   

ಬೀಜಿಂಗ್‌: ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾಗಿದ್ದ ಬಂಧಿತ ಮಹಿಳಾ ಕೈದಿಯ ಮಗುವಿಗೆ ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರು ಎದೆಹಾಲುಣಿಸಿದ್ದು, ಈ ವೇಳೆ ತೆಗೆಯಲಾಗಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಈ ಘಟನೆ ಮಧ್ಯ ಚೀನಾದಲ್ಲಿರುವ ಶಾಂಕ್ಷಿ ಜಿನ್ಹೋಂಗ್‌ ಮಧ್ಯಂತರ ಕೋರ್ಟ್‌ನಲ್ಲಿ ಸೆಪ್ಟೆಂಬರ್‌ 23ರಂದು ನಡೆದಿದೆ. ಪ್ರಕರಣವೊಂದರಲ್ಲಿ ಆರೋಪಿ ಎನ್ನಲಾಗಿದ್ದ ಮಹಿಳೆ ವಿಚಾರಣೆಗೆ ಹಾಜರಾಗುತ್ತಿದ್ದಂತೆ ಆಕೆಯ 4 ನಾಲ್ಕು ತಿಂಗಳ ಮಗು ಅಳಲು ಆರಂಭಿಸಿದೆ. ಆಗ ಆ ಮಹಿಳೆಯಿಂದ ಅನುಮತಿ ಪಡೆದ ಪೊಲೀಸ್‌ ಅಧಿಕಾರಿ ಹಾವೋ ಲಿನಾ ಮಗುವನ್ನು ಸಮಾಧಾನಪಡಿಸುವ ಸಲುವಾಗಿ ಹಾಲುಣಿಸಿದ್ದಾರೆ.

ಘಟನೆ ಬಳಿಕ ಮಾತನಾಡಿದ್ದ ಲಿನಾ, ‘ಮಗುವನ್ನು ಸಂತೈಸಲು ನನ್ನಿಂದ ಸಾಧ್ಯವಾದ ಕೆಲಸವನ್ನು ಮಾಡಿದ್ದೇನೆ’ ಎಂದಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಹಾಲುಣಿಸುವ ವೇಳೆ ಲಿನಾ ಅವರ ಚಿತ್ರಗಳನ್ನು ಸಹೋದ್ಯೋಗಿಯೊಬ್ಬರು ಕ್ಲಿಕ್ಕಿಸಿದ್ದು, ಇವನ್ನು ಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಚಿತ್ರಗಳು ವೈರಲ್‌ ಆಗಿರುವ ಬಗ್ಗೆಯೂ ಸಹಜವಾಗಿ ಪ್ರತಿಕ್ರಿಯಿಸಿರುವ ಲಿನಾ, ‘ಎಲ್ಲಾ ಪೊಲೀಸರೂ ಹೀಗೆಯೇ ಮಾಡುತ್ತಾರೆ ಎಂದು ನಂಬಿದ್ದೇನೆ. ಮುಂದೆ ನನ್ನ ಮಗುವಿಗೂ ಯಾರಾದರು ಸಹಾಯಮಾಡಬಹುದು ಎಂಬ ವಿಶ್ವಾಸವಿದೆ‘ ಎಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.