ADVERTISEMENT

ಮಾಧ್ಯಮ ನಿಮ್ಮ ಜತೆ ಹೇಗೆ ವರ್ತಿಸಿತು?

ಪಿಟಿಐ
Published 28 ಅಕ್ಟೋಬರ್ 2017, 19:30 IST
Last Updated 28 ಅಕ್ಟೋಬರ್ 2017, 19:30 IST
ಮಾಧ್ಯಮ ನಿಮ್ಮ ಜತೆ ಹೇಗೆ ವರ್ತಿಸಿತು?
ಮಾಧ್ಯಮ ನಿಮ್ಮ ಜತೆ ಹೇಗೆ ವರ್ತಿಸಿತು?   

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಓವಲ್ ಕಚೇರಿಯಲ್ಲಿ ಹಾಲೊವೀನ್ ಪಾರ್ಟಿ (ಮಕ್ಕಳು ಭೀತಿ ಹುಟ್ಟಿಸುವಂತಹ ವೇಷ ಹಾಗೂ ಮುಖವಾಡ ಧರಿಸಿಕೊಂಡು ಆಚರಿಸುವ ಕಾರ್ಯಕ್ರಮ) ಆಚರಿಸಿದ್ದು, ಮಕ್ಕಳೊಂದಿಗೆ ಲಘುವಾಗಿ ಮಾತುಕತೆ ನಡೆಸಿದರು.

ಮಾಧ್ಯಮದವರ ಮಕ್ಕಳನ್ನೇ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

ಮಕ್ಕಳ ಪೋಷಕರ ಉದ್ಯೋಗ ಕುರಿತು ಲಘುವಾದ ಧಾಟಿಯಲ್ಲಿ ಮಾತನಾಡಿದ ಟ್ರಂಪ್, ‘ನೀವು ನಿಮ್ಮ ಪೋಷಕರ ರೀತಿಯಲ್ಲಿಯೇ ಬೆಳೆಯು
ತ್ತೀರಾ?’ ಎಂದು ಕೇಳಿದರು. ಬಳಿಕ ‘ಈ ಪ್ರಶ್ನೆಗೆ ನೀವು ಉತ್ತರ ನೀಡಬೇಡಿ. ಅದರಿಂದ ನಾನೇ ಸಮಸ್ಯೆಗೆ ಸಿಲುಕುತ್ತೇನೆ’ ಎಂದರು.

ADVERTISEMENT

ಮಾಧ್ಯಮದವರೊಂದಿಗೆ ಕೊಂಚ ಸಂಕೀರ್ಣ ಸಂಬಂಧ ಹೊಂದಿರುವ ಟ್ರಂಪ್ ‘ಮಾಧ್ಯಮ ಇಂತಹ ಸುಂದರ ಮಕ್ಕಳನ್ನು ಸೃಷ್ಟಿಸಿದೆ ಎಂದು ನಂಬಲಾಗುತ್ತಿಲ್ಲ. ಮಾಧ್ಯಮ ಇದನ್ನು ಹೇಗೆ ಮಾಡಿತು? ನಿಜಕ್ಕೂ ನನಗೆ ನಂಬಲು ಆಗುತ್ತಿಲ್ಲ’ ಎಂದು ಹೇಳಿದರು.

‘ಮಾಧ್ಯಮ ನಿಮ್ಮ ಜತೆ ಹೇಗೆ ವರ್ತಿಸಿತು? ಪ್ರಪಂಚದಲ್ಲಿ ಉಳಿದ ಎಲ್ಲರಿಗಿಂತಲು ನಿಮ್ಮ ಜತೆ ಉತ್ತಮವಾಗಿ ವರ್ತಿಸಿರುತ್ತದೆ ಎಂದು ನಾನು ಪಂದ್ಯ ಕಟ್ಟಬಲ್ಲೆ’ ಎಂದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಪತ್ರಕರ್ತರನ್ನು ಮಕ್ಕಳಿಗೆ ತೋರಿಸಿ ‘ಅವರು ಯಾರು ಎಂದು ನಿಮಗೆ ಗೊತ್ತಿದೆಯೆ? ಅವರು ಸ್ನೇಹಗುಣವುಳ್ಳ ಮಾಧ್ಯಮದವರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.