ADVERTISEMENT

ಮಾಲ್ಡೀವ್ಸ್ ಚುನಾವಣೆಗೆ ಭಾರತದ ವೀಕ್ಷಕರು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST

ಮಾಲೆ (ಪಿಟಿಐ): ಈ ವಾರಾಂತ್ಯದಲ್ಲಿ ಮಾಲ್ಡೀವ್ಸ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಭಾರತೀಯ ವೀಕ್ಷಕರ ಉನ್ನತ ಮಟ್ಟದ ತಂಡ ಇಲ್ಲಿಗೆ ಬಂದಿದೆ.

ಚುನಾವಣಾ ಪ್ರಕ್ರಿಯೆ ಮೇಲ್ವಿಚಾರಣೆ ನಡೆಸುವ ತಂಡವು ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನೂ ಭೇಟಿ ಮಾಡಲಿದೆ.

ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತರಾದ ಜೆ.ಎಂ ಲಿಂಗ್ಡೊ, ಬಿ.ಬಿ. ತಂಡನ್ ಮತ್ತು ಎನ್.ಜಿ. ಗೋಪಾಲಸ್ವಾಮಿ ಹಾಗೂ ಈ ಹಿಂದೆ ಮಾಲ್ಡೀವ್ಸ್‌ಗೆ ಭಾರತದ ಹೈ ಕಮಿಷನರ್ ಆಗಿದ್ದ ಎಸ್.ಎಂ. ಗವೈ ಅವರು ತಂಡದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.