ADVERTISEMENT

ಮಾಲ್ಡೀವ್ಸ್ ರಾಜಕೀಯ ಬಿಕ್ಕಟ್ಟು: ವಿಶ್ವಸಂಸ್ಥೆ ಮಧ್ಯ ಪ್ರವೇಶ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

ಮಾಲೆ (ಎಪಿ): ಮಾಲ್ಡೀವ್ಸ್‌ನಲ್ಲಿಯ ರಾಜಕೀಯ ಬಿಕ್ಕಟ್ಟನ್ನು ಕೊನೆಗಾಣಿಸಲು ವಿಶ್ವಸಂಸ್ಥೆ ಮಧ್ಯೆ ಪ್ರವೇಶಿಸಿದ್ದು, ಮಾಲೆಗೆ ತನ್ನ ಹಿರಿಯ ಅಧಿಕಾರಿಯೊಬ್ಬರನ್ನು ಕಳಿಸಿಕೊಟ್ಟಿದೆ. 

ಇಲ್ಲಿಗೆ ಶುಕ್ರವಾರ ಬಂದಿಳಿದ ವಿಶ್ವಸಂಸ್ಥೆಯ ರಾಜಕೀಯ ವ್ಯವಹಾರಗಳ ಸಹಾಯಕ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಟರಂಕೊ ಅವರು ಅಧ್ಯಕ್ಷ  ವಾಹೀದ್ ಹಸನ್ ಮತ್ತು ಮಾಜಿ ಅಧ್ಯಕ್ಷ ನಶೀದ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಇಬ್ಬರೂ ನಾಯಕರು ತಮ್ಮ ಅಭಿಪ್ರಾಯಗಳನ್ನು ವಿಶ್ವಸಂಸ್ಥೆಯ ಪ್ರತಿನಿಧಿಯ ಎದುರು ಮುಕ್ತವಾಗಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. 

ಮಾಜಿ ಅಧ್ಯಕ್ಷ ನಶೀದ್ ಸ್ವ ಇಚ್ಛೆಯಿಂದ ರಾಜೀನಾಮೆ ಸಲ್ಲಿಸಿದ್ದು ಅವರ ಮೇಲೆ ಯಾವ ರೀತಿಯ ಒತ್ತಡವನ್ನೂ ಹೇರಿಲ್ಲ. ತಮ್ಮ ಸರ್ಕಾರ ಅವರ ಬಂಧನಕ್ಕೂ ಮುಂದಾಗಿಲ್ಲ ಎಂದು ಹೇಳಿದ್ದಾರೆ. ಆದರೆ, ನಶೀದ್ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಸಂಚು ರೂಪಿಸಲಾಗಿತ್ತು. ಬಲವಂತದಿಂದ ರಾಜೀನಾಮೆ ಪಡೆಯಲಾಯಿತು ಎಂದು ಅಳಲು ತೋಡಿಕೊಂಡಿದ್ದಾರೆ.

ಮಂಗಳವಾರ ರಾತ್ರಿ ಆರಂಭವಾಗಿದ್ದ ಗಲಭೆ, ಹಿಂಸಾಚಾರ ನಿಯಂತ್ರಣಕ್ಕೆ ಬಂದಿದ್ದು, ಎಲ್ಲ ದ್ವೀಪಗಳು ಸಹಜ ಸ್ಥಿತಿಗೆ ಮರಳುತ್ತಿವೆ. ಗಲಭೆಗೆ ಸಂಬಂಧಿಸಿದಂತೆ ಬಂಧಿಸಲಾದ ತಮ್ಮ ಬೆಂಬಲಿಗರು ಮತ್ತು ಮಾಲ್ಡೀವ್ಸ್ ಪ್ರಜಾಸತ್ತಾತ್ಮಕ ಪಕ್ಷದ 500 ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡುವಂತೆ ನಶೀದ್  ಮನವಿ ಮಾಡಿದ್ದಾರೆ.

ಭಿನ್ನಮತ: ಮಾಲ್ಡೀವ್ಸ್‌ನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ನೇರ ಪರಿಣಾಮ ನೆರೆಯ ಶ್ರೀಲಂಕಾದ ಮೇಲಾಗಿದೆ. ಈ ವಿಷಯದಲ್ಲಿ ವಹಿಸಬೇಕಾದ ಪಾತ್ರದ ಕುರಿತು ಇಲ್ಲಿಯ ರಾಜಕೀಯ ಪಕ್ಷಗಳು ವಿಭಿನ್ನ ನಿಲುವು ತಾಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.