ADVERTISEMENT

ಮಾಲ್ಡೀವ್ಸ್ ಸಚಿವ ಸಂಪುಟ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

ಮಾಲೆ (ಪಿಟಿಐ): ಮಾಲ್ಡೀವ್ಸ್ ನೂತನ ಅಧ್ಯಕ್ಷ ಮೊಹಮದ್ ವಹೀದ್ ಅವರು ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದು, ಮಾಜಿ ಸರ್ವಾಧಿಕಾರಿ  ಗಯೂಮ್ ಅವರ ಮಗಳಿಗೆ ವಿದೇಶಾಂಗ ಖಾತೆಯ ರಾಜ್ಯ ಸಚಿವ ಸ್ಥಾನವನ್ನು ನೀಡಿದ್ದಾರೆ.

ಈ ಮಧ್ಯೆ ಪದಚ್ಯುತ  ಅಧ್ಯಕ್ಷ ಮೊಹಮದ್ ನಶೀದ್ ಅವರು  ಶೀಘ್ರ ಚುನಾವಣೆ ನಡೆಸುವಂತೆ ಆಗ್ರಹಪಡಿಸಿದ್ದಾರೆ.

ಹೊಸದಾಗಿ ಸಚಿವ ಸ್ಥಾನ ಪಡೆದವರೆಂದರೆ ಶೇಖ್ ಮೊಹಮದ್ ಶಹೀಮ್ ಅಲಿ ಸಯೀದ್ (ಇಸ್ಲಾಮಿಕ್ ವ್ಯವಹಾರ), ಮೊಹಮದ್ ಮೈಜು (ವಸತಿ ಮತ್ತು ಪರಿಸರ) ಮತ್ತು ಧುನಿಯಾ ಮೌಮೂನ್ (ವಿದೇಶಾಂಗ ರಾಜ್ಯ ಸಚಿವೆ).

 ಈ ಬೆಳವಣಿಗೆಯ ಮಧ್ಯೆಯೇ ಕಾಮನ್‌ವೆಲ್ತ್ ಸಚಿವರ ನಿಯೋಗವು ನೂತನ ಅಧ್ಯಕ್ಷರನ್ನು ಭೇಟಿ ಮಾಡಿ ಕ್ಷಿಪ್ರ ರಾಜಕೀಯ ಬೆಳವಣಿಗೆಯ ಕಾರಣಗಳ ಬಗ್ಗೆ ಚರ್ಚಿಸಿದರು.

ಈ ನಿಯೋಗವು ನಶೀದ್ ಅವರ ಪದಚ್ಯುತಿಗೆ ಕಾರಣಗಳನ್ನು ಪತ್ತೆ ಹಚ್ಚಲು ಮತ್ತು ಪ್ರಸಕ್ತ ರಾಜಕೀಯ ಬಿಕ್ಕಟ್ಟಿಗೆ ಪರಿಹಾರ ಹುಡುಕಲು ಇಲ್ಲಿಗೆ ಆಗಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.