ಕ್ವಾಲಾಲಂಪುರ (ಪಿಟಿಐ): ನಿಗೂಢವಾಗಿ ಕಣ್ಮರೆಯಾಗಿರುವ ಮಲೇಷ್ಯಾ ವಿಮಾನದ ಪತ್ತೆ ಕಾರ್ಯವು ಐದನೇಯ ದಿನವಾದ ಬುಧವಾರವೂ ಕೂಡ ಮುಂದುವರಿದಿದ್ದು, ಏತನ್ಮಧ್ಯೆ, ವಿಮಾನವು ರಾಡಾರ್ ಸಂಪರ್ಕಕ್ಕೆ ಸಿಗುತ್ತಿದೆ ಎಂಬ ವದಂತಿಯನ್ನು ಮಿಲಿಟರಿ ಅಧಿಕಾರಿಗಳು ತಳ್ಳಿಹಾಕಿದ್ದಾರೆ.
ರಾಡಾರ್ ಸಂಪರ್ಕ ಕಳೆದುಕೊಂಡ ವಿಮಾನವು ಇದುವರೆಗೂ ಸಂಪರ್ಕಕ್ಕೆ ಸಿಕ್ಕಿಲ್ಲ. ಆಶ್ಚರ್ಯಕರ ರೀತಿಯಲ್ಲಿ ಕಣ್ಮರೆಯಾಗಿರುವ ವಿಮಾನದ ಪತ್ತೆಗಾಗಿ ಸಾಕಷ್ಟು ಹುಡುಕಾಟ ನಡೆಸಲಾಗುತ್ತಿದೆ ಎಂದು ರೋಡ್ಜಾಲಿ ದೌದ್ ತಿಳಿಸಿದ್ದಾರೆ.
ಮಲೇಷಿಯಾ ಏರ್ ಲೈನ್ಸ್ ನ 239 ಜನರಿದ್ದ ಬೊಯಿಂಗ್ 777 ವಿಮಾನವು ಕ್ವಾಲಾಲಂಪುರನಿಂದ ಬಿಜೀಂಗ್ ಹೋಗುವ ಮಾರ್ಗ ಮಧ್ಯೆ ಶನಿವಾರ ಮುಂಜಾನೆ ನಾಪತ್ತೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.