ವಾಷಿಂಗ್ಟನ್ (ಪಿಟಿಐ): ವಿಶ್ವದ ಅತಿ ಪ್ರಾಮಾಣಿಕ ನಗರಗಳ ಪೈಕಿ ಮುಂಬೈಗೆ ಎರಡನೇ ಸ್ಥಾನ ದೊರಕಿರುವುದರಿಂದ ಭಾರತದ ವಾಣಿಜ್ಯ ರಾಜಧಾನಿಯ ಕಿರಿಟಕ್ಕೆ ಈಗ ಮತ್ತೊಂದು ಗರಿ.
ಫಿನ್ಲೆಂಡ್ ರಾಜಧಾನಿ ಹೆಲ್ಸಿಂಕಿ ಪ್ರಾಮಾಣಿಕ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದರೆ, ಪೋರ್ಚುಗಲ್ ರಾಜಧಾನಿ ಲಿಸ್ಬನ್ ಕೊನೆಯ ಸ್ಥಾನದಲ್ಲಿದೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.
ನಾಲ್ಕು ಉಪಖಂಡಗಳ ವಿವಿಧ ಮಹಾನಗರಗಳಲ್ಲಿ ನೂರಾರು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಹಣದ ಪರ್ಸ್ಗಳನ್ನು ಬೀಳಿಸಿ ಎಷ್ಟು ಜನರು ಪ್ರಾಮಾಣಿಕವಾಗಿ ವಾಪಸ್ ಮಾಡಿದ್ದಾರೆ ಎಂಬುದನ್ನುಪರಿಶೀಲಿಸಲಾಗಿದೆ.
ಯೂರೋಪ್, ದಕ್ಷಿಣ ಮತ್ತು ಉತ್ತರ ಅಮೆರಿಕ ಹಾಗೂ ಏಷ್ಯಾ ಖಂಡಗಳ ಪ್ರಮುಖ ನಗರಗಳಲ್ಲಿ ಮೊಬೈಲ್ ಫೋನ್ ಸಂಖ್ಯೆ, ಕುಟುಂಬದ ಚಿತ್ರ, ಬ್ಯುಸಿನೆಸ್ ಕಾರ್ಡ್ ಮತ್ತು ಡಾಲರ್ಗಳನ್ನು ಹಾಕಿದ ಒಟ್ಟು 192 ಪರ್ಸ್ಗಳನ್ನು ಬೀಳಿಸಲಾಗಿತ್ತು. ಅವುಗಳಲ್ಲಿ ಶೇ 47ರಷ್ಟು, ಅಂದರೆ 90 ಪರ್ಸ್ಗಳು ವಾರಸುದಾರರಿಗೆ ವಾಪಸ್ ಆಗಿವೆ. ಹೆಲ್ಸಿಂಕಿಯಲ್ಲಿ ಬೀಳಿಸಿದ್ದ 12 ಪರ್ಸ್ಗಳ ಪೈಕಿ 11, ಮುಂಬೈಯಲ್ಲಿ 12ರ ಪೈಕಿ 9 ಪರ್ಸ್ಗಳು ವಾಪಸಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.