ADVERTISEMENT

ಮುಬಾರಕ್ ಮೇಲೆ ಒತ್ತಡ ತೀವ್ರ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 18:25 IST
Last Updated 2 ಫೆಬ್ರುವರಿ 2011, 18:25 IST

ಕೈರೊ, (ಪಿಟಿಐ): ಹೆಚ್ಚುತ್ತಿರುವ ಒತ್ತಡಗಳಿಗೆ ಕೊನೆಗೂ ಮಣಿದಿರುವ ಈಜಿಪ್ಟ್ ಅಧ್ಯಕ್ಷ ಹೋಸ್ನಿ ಮುಬಾರಕ್ ಅವರು ಸೆಪ್ಟಂಬರ್‌ನಲ್ಲಿ ಪದತ್ಯಾಗ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಇದಕ್ಕೆ ಒಪ್ಪದ ಪ್ರತಿಭಟನಾಕಾರರು ತಕ್ಷಣ ಹುದ್ದೆ ತೊರೆಯುವಂತೆ ಪಟ್ಟು ಹಿಡಿದಿದ್ದು ಶುಕ್ರವಾರದವರೆಗೆ ಗಡುವು ನೀಡಿದ್ದಾರೆ.   

ಈಜಿಪ್ಟ್ ಸರ್ಕಾರದ ವಿರುದ್ಧ ದೇಶದಾದ್ಯಂತ ಸಾರ್ವಜನಿಕರು ಬೀದಿಗಿಳಿದಿರುವ ಹಿನ್ನೆಲೆಯಲ್ಲಿ ಟೆಲಿವಿಷನ್‌ನಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ತಕ್ಷಣ ಅಧಿಕಾರದಿಂದ ಕೆಳಗೆ ಇಳಿಯಲಾರೆ ಎಂದು ಖಂಡತುಂಡವಾಗಿ ಹೇಳಿದ್ದಾರೆ. ಸೆಪ್ಟಂಬರ್‌ನಲ್ಲಿ ತಮ್ಮ ಅಧಿಕಾರವಧಿ ಕೊನೆಗೊಳ್ಳಲಿದ್ದು ಆಗ ರಾಷ್ಟ್ರಾಧ್ಯಕ್ಷರ ಹುದ್ದೆಗೆ ನಡೆಯುವ ಚುನಾವಣೆಗೆ ತಾವು ಸ್ಪರ್ಧಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸುಮಾರು ಹತ್ತು ನಿಮಿಷ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರ ಮುಖ ಕಾಂತಿಹೀನವಾಗಿತ್ತಲ್ಲದೇ, ತೀವ್ರ ಖಿನ್ನತೆಗೆ ಒಳಗಾದಂತೆ ಕಂಡು ಬಂದರು. ‘ದೇಶದ ಯುವಕರೇ, ನಿಮಗೆ ಪ್ರತಿಭಟಿಸುವ ಹಕ್ಕು ಇದೆ’ ಎಂದು ಮೆದುವಾಗಿ ಮಾತು ಆರಂಭಿಸಿದ ಅವರು ನಂತರ ತಮ್ಮ ವಿರೋಧಿಗಳ ವಿರುದ್ಧ ಟೀಕಾ ಪ್ರಹಾರ ಮಾಡಿದರು.

 
 ಈಜಿಪ್ಟ್‌ನ ಸದ್ಯದ ಪರಿಸ್ಥಿತಿ ಕುರಿತಂತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ (ಚಿತ್ರದಲ್ಲಿ ಇಲ್ಲ) ಅವರು ವಾಷಿಂಗ್ಟನ್‌ನಲ್ಲಿ ಬುಧವಾರ ಮಾಡಿದ ಭಾಷಣದ ನೇರಪ್ರಸಾರವನ್ನು ಕೈರೊದ ತೆಹ್ರಿರ್ ಚೌಕದಲ್ಲಿ ಸೇರಿದ್ದ ಸಾವಿರಾರು ಸರ್ಕಾರ-ವಿರೋಧಿ ಪ್ರತಿಭಟನಾಕಾರರು ವೀಕ್ಷಿಸಿದರು. ಅಧ್ಯಕ್ಷ ಹೋಸ್ನಿ ಮುಬಾರಕ್ ಅವರ ಪ್ರತಿಕೃತಿಗಳು ಟ್ರಾಫಿಕ್ ಸಿಗ್ನಲ್‌ಗಳ ಕಂಬಗಳಲ್ಲಿ ನೇತಾಡುತ್ತಿರುವುದನ್ನೂ ಕಾಣಬಹುದು.  -ಎಪಿ ಚಿತ್ರ
ಶುಕ್ರವಾರದ ಗಡುವು:
ಸೇನೆ ಸೂಚನೆ
ದೊಡ್ಡಣ್ಣನ ಮಧ್ಯ ಪ್ರವೇಶ:
ಮುಂದುವರಿದ ಪ್ರಕ್ಷುಬ್ಧತೆ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT