ವೆರಾಕ್ರ್ೂ (ಮೆಕ್ಸಿಕೊ), (ಎಪಿ): ಮೆಕ್ಸಿಕೊದ ಸಮುದ್ರ ತೀರದ ರಾಜ್ಯ ವೆರಾಕ್ರ್ೂನಲ್ಲಿ ಮೂರು ಪ್ರಯಾಣಿಕರ ಬಸ್ಸುಗಳ ಮೇಲೆ ಬಂದೂಕುಧಾರಿಗಳ ಗುಂಪೊಂದು ದಾಳಿ ಮಾಡಿ ಏಳು ಜನರನ್ನು ಕೊಂದುಹಾಕಿದೆ. ದರೋಡೆ ಮಾಡುವ ಉದ್ದೇಶದಿಂದ ಈ ಹಿಂಸಾಚಾರ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಸೈನಿಕರು ಐವರು ದಾಳಿಕಾರರನ್ನು ಬೆನ್ನಟ್ಟಿದರು ಹಾಗೂ ಅವರು ಆಕ್ರಮಣ ಮಾಡಿದಾಗ ಗುಂಡು ಹಾರಿಸಿ ಎಲ್ಲ ಬಂದೂಕುಧಾರಿಗಳನ್ನು ಕೊಂದುಹಾಕಿದರು ಎಂದು ರಕ್ಷಣಾ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.