ADVERTISEMENT

ಮೆಟ್‌ ಗಾಲಾ 2018: ಗಮನ ಸೆಳೆದ ಪ್ರಿಯಾಂಕಾ, ದೀಪಿಕಾ

ಏಜೆನ್ಸೀಸ್
Published 8 ಮೇ 2018, 5:32 IST
Last Updated 8 ಮೇ 2018, 5:32 IST
ಮೆಟ್‌ ಗಾಲಾ 2018: ಗಮನ ಸೆಳೆದ ಪ್ರಿಯಾಂಕಾ, ದೀಪಿಕಾ
ಮೆಟ್‌ ಗಾಲಾ 2018: ಗಮನ ಸೆಳೆದ ಪ್ರಿಯಾಂಕಾ, ದೀಪಿಕಾ   

ನ್ಯೂಯಾರ್ಕ್‌: ಫ್ಯಾಷನ್‌ ಕ್ಷೇತ್ರದ ಆಸ್ಕರ್‌ ಎಂದೇ ಕರೆಸಿಕೊಳ್ಳುವ ಮೆಟ್‌ ಗಾಲಾ ಕಾರ್ಯಕ್ರಮದಲ್ಲಿ ನಟಿಯರಾದ ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ಗಮನ ಸೆಳೆದಿದ್ದಾರೆ.

ನ್ಯೂಯಾರ್ಕ್‌ ಮೂಲದ ವಸ್ತ್ರವಿನ್ಯಾಸ ಸಂಸ್ಥೆಯ ಪ್ರದರ್ಶನ ಕಾರ್ಯಕ್ರಮ ಮೆಟ್‌ ಗಾಲಾ 2018ರಲ್ಲಿ ಕ್ವಾಂಟಿಕೊ ತಾರೆ ಪ್ರಿಯಾಂಕಾ ಚೋಪ್ರಾ(35) ವೆಲ್ವೆಟ್‌ ನಿಲುವಂಗಿಯಲ್ಲಿ ಕಾಣಿಸಿಕೊಂಡಿದ್ದಾರೆ.

ರಾಲ್ಫ್‌ ಲಾರೆನ್‌ ವಿನ್ಯಾಸದ ರೆಡ್‌ ವೈನ್‌ ಬಣ್ಣದ ನಿಲುವಂಗಿ ಹಾಗೂ ಚಿನ್ನದ ವಿನ್ಯಾಸಗೊಳಿಸಿದ ತಲೆಗವುಸು ಧರಿಸಿದ್ದ ಪ‍್ರಿಯಾಂಕ ಗಮನ ಸೆಳೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.