ADVERTISEMENT

ಮೋದಿ, ನಿತೀಶ್, ಮಾಯಾ ಕಾರ್ಯವೈಖರಿ ಪ್ರಶಂಸೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 8:05 IST
Last Updated 15 ಸೆಪ್ಟೆಂಬರ್ 2011, 8:05 IST

ವಾಷಿಂಗ್ಟನ್, (ಪಿಟಿಐ): ಒಳ್ಳೆಯ ಆಡಳಿತ ಮತ್ತು ಅಭಿವೃದ್ಧಿಗೆ ಗುಜರಾತ್ ಸರ್ಕಾರ ಉತ್ತಮ ಮಾದರಿ ಎಂದು ಸಿಆರ್‌ಎಸ್ ವರದಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದೆ.

ಮೋದಿ ನಾಯಕತ್ವದಲ್ಲಿ ಗುಜರಾತ್ ಸರ್ಕಾರ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಆ ರಾಜ್ಯದ ಮಾದರಿ ಅನುಸರಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಕೂಡಾ ಉತ್ತಮ ಆಡಳಿತ ನೀಡಿದ್ದಾರೆ ಎಂದು ಪ್ರಶಂಸಿಸಿದೆ.

ಉತ್ತಮ ದರ್ಜೆಯ ಅತ್ಯಾಧುನಿಕ ರಸ್ತೆಗಳು, ವಿದ್ಯುತ್ ಸಂಪರ್ಕಗಳಿಂದಾಗಿ ಮೋದಿ 2002ರಲ್ಲಿ ನಡೆದ ಕೋಮುದಳ್ಳುರಿಯ ಕಪ್ಪುಚುಕ್ಕೆಯಿಂದ ಹೊರಬರುವ ಪ್ರಯತ್ನ ಮಾಡಿದ್ದಾರೆ. ಜನರಲ್ ಮೋಟಾರ್ಸ್, ಮಿತ್ಸುಬಿಶಿಯಂತಹ ದೈತ್ಯ ಕಂಪೆನಿಗಳಿಂದ ಬಂಡವಾಳ ಸೆಳೆಯಲು ಸಫಲರಾಗಿದ್ದಾರೆ. ಅದರಂತೆ ನಿತೀಶ್ ಅವರು ಬಿಹಾರದಲ್ಲಿ ಹದಗೆಟ್ಟಿದ್ದ ಕಾನೂನು, ಸುವ್ಯವಸ್ಥೆಯನ್ನು ಸರಿಪಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ಮೂಲಸೌಕರ್ಯ, ಶಿಕ್ಷಣಕ್ಕೆ ಆದ್ಯತೆ ನೀಡಿ ಒಳ್ಳೆಯ ಆಡಳಿತ ನೀಡಿದ್ದಾರೆ. ಮಾಯಾವತಿ ಕೂಡ ಇದೇ ಹಾದಿ ತುಳಿದಿದ್ದಾರೆ ಎಂದು 94 ಪುಟಗಳ ವರದಿ ಶ್ಲಾಘಿಸಿದೆ.

ಪ್ರತ್ಯೇಕ ರಾಜ್ಯಕ್ಕಾಗಿ ಆಂಧ್ರ ಪ್ರದೇಶದಲ್ಲಿ ನಡೆಯುತ್ತಿರುವ ತೆಲಂಗಾಣ ಹೋರಾಟ, ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ ಆಡಳಿತದ ಚುಕ್ಕಾಣಿ ಹಿಡಿದಿರುವ ಮಮತಾ ಬ್ಯಾನರ್ಜಿ ಅವರ ಬಗ್ಗೆಯೂ ಇದರಲ್ಲಿ ಪ್ರಸ್ತಾಪವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.