ಕಠ್ಮಂಡು (ಐಎಎನ್ಎಸ್): ಮೌಂಟ್ ಎವರೆಸ್ಟ್ ಏರುವ ಎಲ್ಲಾ ಚಾರಣಿಗರು ಅದರ ತುದಿಯನ್ನು ಏರಲಾಗದು ಎಂದು ಪಶ್ಚಾತಾಪ ಪಡುವ ಹಾಗಿಲ್ಲ. ಚಾರಣಿಗರ ಅನುಕೂಲಕ್ಕಾಗಿ ಎವರೆಸ್ಟ್ ಏರಲು ಈಗ ಏಣಿ ತಯಾರಾಗುತ್ತಿದೆ.
ನೇಪಾಳ ಪ್ರವಾಸೋದ್ಯಮ ಸಚಿವಾಲಯ ಎವರೆಸ್ಟ್ ಶಿಖರದ ಸುಮಾರು 40 ಅಡಿ ಎತ್ತರ ಇರುವ ಕೊನೆಯ ಹಿಮ ಬಂಡೆ ‘ಹಿಲರಿ ಸ್ಟೆಪ್’ಗೆ ಏಣಿ ನಿರ್ಮಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ‘ಏಪ್ರಿಲ್ ಮತ್ತು ಜೂನ್ ನಲ್ಲಿ ಹೆಚ್ಚು ಜನರು ಎವರೆಸ್ಟ್ ಏರುವುದರಿಂದ ‘ಹಿಲರಿ ಸ್ಟೆಪ್’ನಲ್ಲಿ ಜನದಟ್ಟಣೆ ಹೆಚ್ಚಿರುತ್ತದೆ.
ಅಲ್ಲದೆ ಚಾರಣಿಗರ ಸುರಕ್ಷತೆ ದೃಷ್ಟಿಯಿಂದ ಹಿಲರಿ ಸ್ಟೆಪ್‌ನಲ್ಲಿ ಏಣಿ ನಿರ್ಮಿಸಲು ಯೋಜಿಸಿದ್ದೇವೆ ಎಂದು ಇಲ್ಲಿನ ಪ್ರವಾಸೋದ್ಯಮ ಸಚಿವಾಲಯದ ವಕ್ತಾರ ಮೋಹನ್ ಕೃಷ್ಣಾ ಸಾಪ್‌ಕೋಟ ಹೇಳಿದ್ದಾರೆ. ‘ಹಿಮ ಶಿಖರದಲ್ಲಿ ಏಣಿ ನಿರ್ಮಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ನಾವು ಈ ಬಗ್ಗೆ ಚಿಂತಿಸಿದ್ದು, ಮುಂದೆ ಇದನ್ನು ಕಾರ್ಯರೂಪಕ್ಕೆ ತರುತ್ತೇವೆ ’ ಎಂದು ಅವರು ತಿಳಿಸಿದ್ದಾರೆ.
ಎಡ್ಮಂಡ್ ಹಿಲರಿ ಮತ್ತು ತೇನ್‌ಸಿಂಗ್ ಮೊದಲು ಎವರೆಸ್ಟ್ ಪರ್ವತ ಏರಿದ ನಂತರದಲ್ಲಿ ಪರ್ವತ ಏರಲು ಹೋಗಿ ಸುಮಾರು 300 ಜನ ಸಾವನ್ನಪಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.