ADVERTISEMENT

ಯುಎಇಯಲ್ಲಿ ಒಂಟೆ ಉತ್ಸವ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ದುಬೈ(ಪಿಟಿಐ): ಸಂಯುಕ್ತ ಅರಬ್ ಎಮಿರೇಟ್ಸ್‌ನಲ್ಲಿ (ಯುಎಇ) ವಾರ್ಷಿಕ ಒಂಟೆ ಉತ್ಸವ ಆರಂಭವಾಗಿದೆ.
ಈ ಉತ್ಸವದಲ್ಲಿ ಒಂಟೆಗಳಿಗಾಗಿ ಸೌಂದರ್ಯ ಸ್ಪರ್ಧೆ, ಓಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಹತ್ತು ಸಾವಿರಕ್ಕೂ ಹೆಚ್ಚು ಒಂಟೆಗಳು ಭಾಗವಹಿಸುವ ಅಂದಾಜಿದೆ.

ಜ.5ರವರೆಗೆ ನಡೆಯುವ `ಷೇಕ್ ಝಯಾದ್ ರೇಸ್ ಗ್ರ್ಯಾಂಡ್ ಪ್ರಿಕ್ಸ್~ಗೆ 80 ಲಕ್ಷ ಡಾಲರ್ ಮೊತ್ತದ ಬಹುಮಾನಗಳನ್ನು ಇಡಲಾಗಿದೆ. ವಿವಿಧ ಗುಂಪುಗಳಲ್ಲಿ 150 ಕ್ಕೂ ಹೆಚ್ಚು ಬಗೆಯ ಸ್ಪರ್ಧೆಗಳು ನಡೆಯಲಿವೆ.

ಉತ್ಸವದ ಮೊದಲನೆಯ ದಿನ, ನಾಲ್ಕು ಕಿ.ಮೀ ಓಟ ಸ್ಪರ್ಧೆ ಜತೆಗೆ 59 ಒಂಟೆಗಳ ಹರಾಜು ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.