ADVERTISEMENT

ಯುದ್ಧ ವಿಮಾನ ಬೆಂಗಾವಲು...!

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:30 IST
Last Updated 12 ಸೆಪ್ಟೆಂಬರ್ 2011, 19:30 IST

ನ್ಯೂಯಾರ್ಕ್, (ಪಿಟಿಐ): ಭಯೋತ್ಪಾದಕರು ಇರುವ ಎಂಬ ಶಂಕೆ ಯಿಂದ ಅಮೆರಿಕದ ಯುದ್ಧ ವಿಮಾನಗಳ ಬೆಂಗಾವಲಿನಲ್ಲಿ ಎರಡು ನಾಗರಿಕಯಾನ ವಿಮಾನಗಳನ್ನು  ನ್ಯೂಯಾರ್ಕ್‌ನ ಕೆನಡಿ ವಿಮಾನ ನಿಲ್ದಾಣ ಮತ್ತು ಡೆಟ್ರಾಯಿಟ್ ಮೆಟ್ರೊಪಾಲಿಟಿನ್ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು.

ವಿಮಾನದಲ್ಲಿ ಮೂವರು ಸಂಶಯಾಸ್ಪದವಾಗಿ ನಡೆದುಕೊಳ್ಳುತ್ತಿದ್ದರಿಂದ ವಿಮಾನದ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮವಾಗಿ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡಿದರು. ಕೂಡಲೆ ನ್ಯೂಯಾರ್ಕ್ ಮತ್ತು ಡೆಟ್ರಾಯಿಟ್‌ಗೆ ಹೊರಟಿದ್ದ ಎರಡು ವಿಮಾನಗಳ ಬೆಂಗಾವಲಿಗೆ ಎಫ್-16 ಯುದ್ಧ ವಿಮಾನವನ್ನು ಕಳುಹಿಸಲಾಯಿತು.

ಡೆಟ್ರಾಯಿಟ್‌ಗೆ ತೆರಳುತ್ತಿದ್ದ ಫ್ರಾಂಟಿಯರ್ ಏರ್‌ಲೈನ್ಸ್ ಸಂಸ್ಥೆಯ ವಿಮಾನದಲ್ಲಿ ಮೂವರು ಪ್ರಯಾಣಿಕರು ಬಹಳಷ್ಟು ಸಮಯವನ್ನು ಶೌಚಾಲಯದಲ್ಲಿ ಕಳೆದಿದ್ದರಿಂದ ಸಂಶಯಗೊಂಡ ವಿಮಾನದ ಸಿಬ್ಬಂದಿ ನಿಯಂತ್ರಣ ಕಚೇರಿಗೆ ಸುದ್ದಿ ಮುಟ್ಟಿಸಿದರು. ನ್ಯೂಯಾರ್ಕ್‌ಗೆ ಹೊರಟಿದ್ದ ವಿಮಾನಕ್ಕೂ ಎಫ್-16 ಯುದ್ಧ ವಿಮಾನವನ್ನು ಬೆಂಗಾವಲಿಗೆ ಕಳುಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.