ADVERTISEMENT

ಯೂರೋಪ್‌ನಲ್ಲಿ ‘ಕೇಸರಿ ಹಿಮ’

ಏಜೆನ್ಸೀಸ್
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST
ಯೂರೋಪ್‌ನಲ್ಲಿ ‘ಕೇಸರಿ ಹಿಮ’
ಯೂರೋಪ್‌ನಲ್ಲಿ ‘ಕೇಸರಿ ಹಿಮ’   

ಬುಕಾರೆಸ್ಟ್‌, ರೊಮಾನಿಯಾ: ರಷ್ಯಾದ ಸೋಚಿ ಪ್ರದೇಶದ ಪರ್ವತಗಳಲ್ಲಿ ಮಂಗಳವಾರ ಬಿದ್ದ ಹಿಮವು ಕೇಸರಿ ಬಣ್ಣ ಹೊಂದಿದ್ದು ಈ ಭಾಗದಲ್ಲಿ ಕೌತುಕ ಮೂಡಿಸಿತು.

ಆಫ್ರಿಕಾದ ಸಹರಾ ಮರುಭೂಮಿಯ ಕಡೆಯಿಂದ ಬೀಸಿದ ದೂಳು ಮಿಶ್ರಿತ ಗಾಳಿಯು ಸೈಬಿರೀಯಾದ ಹಿಮದ ಜೊತೆ ಸೇರಿ ಈ ಬಣ್ಣ ಸೃಷ್ಟಿಯಾಗಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇಲ್ಲಿ ಛಾಯಾಚಿತ್ರ ತೆಗೆದುಕೊಂಡ ಪ್ರವಾಸಿಗರು ‘ನಾವು ಮಂಗಳಗ್ರಹದಲ್ಲಿ ಇದ್ದೇವೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವ ಮೂಲಕ ತಮಾಷೆ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.