ADVERTISEMENT

ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 19:59 IST
Last Updated 22 ಏಪ್ರಿಲ್ 2013, 19:59 IST

ಬೀಜಿಂಗ್ (ಪಿಟಿಐ): ಇಲ್ಲಿನ ಭೂಕಂಪ ಪೀಡಿತ ಸಿಚುವಾನ್ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದ್ದು, ಹಲವೆಡೆ ವಾಯುಪಡೆ ವಿಮಾನದ ಮೂಲಕ ನೀರು ಮತ್ತು ಇತರ ಅವಶ್ಯಕ ಸಾಧನಗಳನ್ನು ನೀಡಲಾಯಿತು.

ಇದುವರೆಗೆ ಸುಮಾರು 2.6 ಟನ್‌ಗಳಷ್ಟು ಅಗತ್ಯ ವಸ್ತುಗಳನ್ನು ಪೂರೈಸಲಾಗಿದೆ. ಘಟನೆಯಲ್ಲಿ ಸುಮಾರು 12,000 ದಷ್ಟು ಜನರು ಗಾಯಗೊಂಡಿದ್ದು, ಸುಮಾರು ಸಾವಿರಕ್ಕೂ ಹೆಚ್ಚು ಜನರ ಸ್ಥಿತಿ ಚಿಂತಾಜನಕವಾಗಿದೆ.

ಭೂಕಂಪನಕ್ಕೆ ಹೆದರಿದ ಪಾಂಡಾಗಳು...

ಬೀಜಿಂಗ್ (ಐಎಎನ್‌ಎಸ್): ಚೀನಾದ ಸಿಚುವಾನ್‌ನಲ್ಲಿ ಸಂಭವಿಸಿದ ಭಾರಿ ಭೂಕಂಪನದಿಂದ ಅಪರೂಪದ ಜೀವಸಂಕುಲವಾಗಿರುವ ಇಲ್ಲಿನ ದೈತ್ಯಾಕಾರದ ಪಾಂಡಾಗಳು ಹೆದರಿಕೊಂಡಿದ್ದು, ಅವುಗಳಲ್ಲಿ ಧೈರ್ಯ  ತುಂಬುವ (ಮನೋವೈಜ್ಞಾನಿಕ ಚಿಕಿತ್ಸೆ) ಕೆಲಸಕ್ಕೆ ಸರ್ಕಾರ ಮುಂದಾಗಿದೆ.

ಭೂಕಂಪನದಿಂದ ಪಾಂಡಾಗಳು ಸಾವನ್ನಪ್ಪಿರುವ ಅಥವಾ ಗಾಯಗೊಂಡಿರುವ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ. ಆದರೆ, ಘಟನೆಯಿಂದ ಅವುಗಳು ಹೆದರಿಕೊಂಡಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಭೂಕಂಪನದ ಕೇಂದ್ರ ಬಿಂದು ಲಾಂಗ್‌ಮೆನ್ ಕೌಂಟಿಯಿಂದ 50 ಕಿ.ಮೀ ದೂರದ ಯಾಆ್ಯನ್ ಪಾಂಡಾಗಳ ಪ್ರಮುಖ ವಾಸ ಕೇಂದ್ರವಾಗಿದೆ.  

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.