ADVERTISEMENT

ರಷ್ಯ ಪೆಸಿಫಿಕ್ ಜನತೆಗೆ ವಿಕಿರಣ ಮಾಲಿನ್ಯದ ಭಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 19:30 IST
Last Updated 16 ಮಾರ್ಚ್ 2011, 19:30 IST

ಮಾಸ್ಕೊ (ಎಪಿ): ಅಣು ವಿಕಿರಣ ವಿಪತ್ತಿಗೆ ಸಿಲುಕಿರುವ ಜಪಾನಿನ ಕಡೆಯಿಂದ ಬೀಸುವ ಗಾಳಿ ತಮ್ಮ ಪ್ರದೇಶದಲ್ಲೂ ವಿಕಿರಣ ಮಾಲಿನ್ಯ  ಉಂಟುಮಾಡಬಹುದೆಂಬ ಆತಂಕ ರಷ್ಯ ಪೆಸಿಫಿಕ್ ವಲಯದಲ್ಲಿ ಕಂಡುಬಂದಿದೆ.

ಅಯೋಡಿನ್, ವೈನ್ ಮತ್ತು ವೋಡ್ಕಾ ಸೇವನೆ ವಿಕಿರಣದ ಅಪಾಯ ತಗ್ಗಿಸುತ್ತದೆ ಎಂದು ಜಪಾನ್ ಗಡಿಗೆ ಸಮೀಪವಿರುವ ಈ ಜನ ಭಾವಿಸಿದ್ದು, ಈ ವಸ್ತುಗಳನ್ನು ಮುಗಿಬಿದ್ದು ಕೊಳ್ಳುತ್ತಿದ್ದಾರೆ.

ಮುಖವಾಡ ಹಾಗೂ ವಿಕಿರಣ ಮಾಪಕ ತಯಾರಿಕಾ ಕಂಪೆನಿಗಳು ಇದೇ ಸಂದರ್ಭ ಬಳಸಿಕೊಂಡು ಜನರಲ್ಲಿ ಭಯ ಹುಟ್ಟಿಸುತ್ತಿವೆ ಎಂಬ ದೂರುಗಳು ಕೂಡ ಕೇಳಿಬಂದಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.