ಲಂಡನ್ (ಐಎಎನ್‌ಎಸ್): ಬಾಹ್ಯಾಕಾಶದಲ್ಲಿ ಹಾರಾಟ ನಡೆಸಿ, ಅದರ ಅನುಭವ ಪಡೆಯಬೇಕೆಂಬ ಕನಸು ಈಗ ನನಸು ಮಾಡಿಕೊಳ್ಳಬಹುದು. ನಿಮ್ಮಲ್ಲಿ ರೂ. 1.25 ಕೋಟಿ ಹಣವಿದ್ದರೆ ಸಾಕು, ಭೂಮಿಯಿಂದ 100 ಕಿ.ಮೀ ಎತ್ತರದಲ್ಲಿ ಬಾಹ್ಯಾಕಾಶ ಯಾತ್ರೆಯ ಅನುಭವ ಕಟ್ಟಿಕೊಳ್ಳಬಹುದು.
ಬಾಹ್ಯಾಕಾಶ ಯಾತ್ರೆ ಆಯೋಜನೆಯಲ್ಲಿ ಮುಂಚೂಣಿಯಲ್ಲಿರುವ ಯೂರೋಪಿನ ಆಸ್ಟ್ರಿಯಮ್ ಏರ್ ಬಸ್ ಕಂಪೆನಿ ಈ ಅವಕಾಶ ಕಲ್ಪಿಸುತ್ತಿದೆ. ಮುಂಬರುವ ಮೇ ತಿಂಗಳಲ್ಲಿ ಆಸ್ಟ್ರಿಯಮ್ ಗಗನನೌಕೆಯು ಸಿಂಗಪುರದಲ್ಲಿ 10 ಸಾವಿರ ಅಡಿ ಎತ್ತರದಲ್ಲಿ ತನ್ನ ಮೊದಲ ಯಾತ್ರೆ ನಡೆಸುತ್ತದೆ.
ಮೊದಲ ಯಾತ್ರೆ ಯಶಸ್ವಿಯಾದರೆ ಎರಡನೇ ಬಾರಿ ಲಕ್ಷ ಅಡಿ ಎತ್ತರದಲ್ಲಿ ಹಾರಾಟ ನಡೆಸಲಿದೆ ಎಂದು ಆಸ್ಟ್ರಿಯಮ್ ಅಧಿಕಾರಿಗಳು ತಿಳಿಸಿದ್ದಾರೆ.
ಯಾತ್ರೆಯ ಅವಧಿ ಎರಡು ಗಂಟೆಯದಾಗಿದ್ದು, ಈ ನೌಕೆಯು 15 ಅಡಿ ಉದ್ದ ಹಾಗೂ ಮಾಮೂಲಿ ಬಾಹ್ಯಾಕಾಶ ನೌಕೆಯ ಕಾಲು ಭಾಗದ ವಿಸ್ತೀರ್ಣ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.