ADVERTISEMENT

ರೆಸ್ಟೋರೆಂಟ್ ಮಾಲೀಕನ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 19:59 IST
Last Updated 11 ಜೂನ್ 2013, 19:59 IST

ಮೆಲ್ಬರ್ನ್ (ಪಿಟಿಐ): ಆಸ್ಟ್ರೇಲಿಯಾದ ಬಲ್ಲಾರತ್‌ನಲ್ಲಿ ಯುವಕರ ಗುಂಪೊಂದು ಭಾರತೀಯ ರೆಸ್ಟೋರೆಂಟ್ ಮಾಲೀಕನನ್ನು  ಥಳಿಸಿದ್ದು, ಆತನನ್ನು ನಿಂದಿಸಲಾಗಿದೆ.

ಹಿಮಾನ್ಶು ಗೋಯಲ್(22) ಎಂಬ ವ್ಯಕ್ತಿ ತನ್ನ  ರೆಸ್ಟೋರೆಂಟ್‌ನ್ನು ಶುಕ್ರವಾರ ರಾತ್ರಿ ಮುಚ್ಚುವ ಸಮಯದಲ್ಲಿ 8 ಯುವಕರು ಆತನ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದಾರೆ. ಅದೇ ಗುಂಪಿನಲ್ಲಿದ್ದ ಮತ್ತೊಬ್ಬ ಯುವಕ ಹಿಮಾನ್ಶು ಅವರ ಮುಖಕ್ಕೆ ಗುದ್ದಿದ್ದಾನೆ.

ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ.  ಸಿಸಿಟಿವಿ ಮಾಹಿತಿಗಳನ್ನು ಪೊಲೀಸರು ವೀಕ್ಷಿಸಿದ್ದು ದಾಳಿಕೋರರನ್ನು ಸದ್ಯದಲ್ಲೇ ಬಂಧಿಸುವ ಸಾಧ್ಯತೆಗಳಿವೆ ಎಂದು ಬಲ್ಲಾರತ್ ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.