ADVERTISEMENT

ರೆಹಮಾನ್ ಕೈತಪ್ಪಿದ ಗೋಲ್ಡನ್ ಗ್ಲೋಬ್

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 19:30 IST
Last Updated 17 ಜನವರಿ 2011, 19:30 IST
ರೆಹಮಾನ್ ಕೈತಪ್ಪಿದ ಗೋಲ್ಡನ್ ಗ್ಲೋಬ್
ರೆಹಮಾನ್ ಕೈತಪ್ಪಿದ ಗೋಲ್ಡನ್ ಗ್ಲೋಬ್   

ಲಾಸ್ ಏಂಜಲೀಸ್ (ಐಎಎನ್‌ಎಸ್): 68ನೇ ವಾರ್ಷಿಕ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರಕಟವಾಗಿದ್ದು ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್‌ಗೆ  ಅದೃಷ್ಟ ಒಲಿಯಲಿಲ್ಲ. ಡ್ಯಾನಿ ಬಾಯ್ಲಾ ನಿರ್ದೇಶನದ ‘127 ಅವರ್ಸ್‌’ ಚಿತ್ರಕ್ಕೆ ಸಂಗೀತ ನೀಡಿದ್ದ ರೆಹಮಾನ್‌ಗೆ ಪ್ರಶಸ್ತಿ ದೊರೆಯಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಅಂತಿಮವಾಗಿ ‘ದಿ ಸೋಷಿಯಲ್ ನೆಟ್‌ವರ್ಕ್’ ಚಿತ್ರಕ್ಕಾಗಿ ಟ್ರೆಂಟ್ ರೇಂಜರ್ ಮತ್ತು ಅಟ್ಟಿಕಸ್ ರೋಸ್‌ಗೆ ಪ್ರಶಸ್ತಿ ದೊರೆಯಿತು.

ಎರಡು ಬಾರಿ ಆಸ್ಕರ್ ಪ್ರಶಸ್ತಿಗೆ ಪಾತ್ರರಾಗಿರುವ ರೆಹಮಾನ್‌ಗೆ  ಅಲೆಕ್ಸಾಂಡರ್ ಡೆಸ್‌ಪ್ಲಾಟ್ (ದಿ ಕಿಂಗ್ಸ್ ಸ್ಪೀಚ್), ಡ್ಯಾನಿ ಎಲ್ಫ್‌ಮ್ಯಾನ್ (ಆಲೀಸ್ ಇನ್ ವಂಡರ್‌ಲ್ಯಾಂಡ್) ಮತ್ತು ಹ್ಯಾನ್ಸ್ ಜಿಮ್ಮರ್ (ಇನ್‌ಸೆಪ್ಶನ್) ಸ್ಪರ್ಧೆ ನೀಡಿದ್ದರು.ಸೋಷಿಯಲ್ ನೆಟ್‌ವರ್ಕಿಂಗ್ ವೆಬ್‌ಸೈಟ್ ಫೇಸ್‌ಬುಕ್ ಕುರಿತ ಕಥೆಯನ್ನಾಧರಿಸಿದ ‘ದಿ ಸೋಷಿಯಲ್ ನೆಟ್‌ವರ್ಕ್’ ಚಿತ್ರ ಒಟ್ಟು 18 ಹಾಡುಗಳನ್ನು ಒಳಗೊಂಡಿದೆ. 

 ಡ್ಯಾನಿ ಬಾಯ್ಲಾ ಅವರ ‘127 ಅವರ್ಸ್‌’ ಸಿನಿಮಾದ ‘ಇಫ್ ಐ ರೈಸ್’ ಗೀತೆಗೆ ಸಂಗೀತ ಸಂಯೋಜಿಸಿರುವ ರೆಹಮಾನ್, ಇದನ್ನು ಅಮೆರಿಕದ ಕಲಾವಿದ ಡಿಡೊ ಅವರೊಂದಿಗೆ ಹಾಡಿದ್ದಾರೆ. ಹಲವು ಭಾರತೀಯ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದ ರೆಹಮಾನ್ 2009ರಲ್ಲಿ ‘ಸ್ಲಂಡಾಗ್ ಮಿಲಿಯನೇರ್’ ಚಿತ್ರಕ್ಕಾಗಿ ಎರಡು ಆಸ್ಕರ್ ಪ್ರಶಸ್ತಿಗಳನ್ನು ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.