ಲಂಡನ್ (ಪಿಟಿಐ): ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ನೈಜ ಜೀವನ ಆಧರಿಸಿದ ನಾಟಕ ‘ನಿರ್ಭಯಾ’ ಮಾರ್ಚ್ 12ರವರೆಗೆ ಲಂಡನ್‌ನಲ್ಲಿ ಪ್ರದರ್ಶನಗೊಳ್ಳಲಿದೆ.
2012ರ ಡಿಸೆಂಬರ್ 16ರ ಕರಾಳ ರಾತ್ರಿ ದೆಹಲಿಯ ರಸ್ತೆಯಲ್ಲಿ ‘ನಿರ್ಭಯಾ’ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯ ಸುತ್ತ ಹೆಣೆಯಲಾದ ಈ ಕಥೆಯನ್ನು ಕೆನಡಾ ಮೂಲದ ರಂಗಕರ್ಮಿ ಯೇಲ್ ಫೇಬರ್ ನಾಟಕಕ್ಕೆ ಅಳವಡಿಸಿ, ನಿರ್ದೇಶಿಸಿದ್ದಾರೆ.
ಕಳೆದ ವರ್ಷ ಎಡಿನ್‌ಬರೋದಲ್ಲಿ ನಡೆದ ಉತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡ ‘ನಿರ್ಭಯಾ’ ರಂಗಪ್ರಯೋಗ ಭಾರಿ ಜನಮೆಚ್ಚುಗೆ ಗಳಿಸಿತ್ತು. ಕಳೆದ ವರ್ಷ ಸ್ಕಾಟ್ಲೆಂಡ್‌ನಲ್ಲಿ ನಡೆದ ಪ್ರದರ್ಶನವು ‘ಅಮ್ನೆಸ್ಟಿ’ ಅಂತರರಾಷ್ಟ್ರೀಯ ಪ್ರಶಸ್ತಿಯನ್ನೂ ಬಾಚಿಕೊಂಡಿದೆ. ಲಂಡನ್‌ನ ಸೌತ್‌ಬ್ಯಾಂಕ್ ಸೆಂಟರ್ನಲ್ಲಿ ಮಾ. 12ರ ವರೆಗೆ ಪ್ರದರ್ಶನಗೊಳ್ಳಲಿದೆ. ನಂತರ ಮುಂಬೈ, ದೆಹಲಿ, ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.