ADVERTISEMENT

ಲಂಡನ್: ಜೀತ ಮುಕ್ತಿಗೆ ಹೊಸ ಯೋಜನೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 19:59 IST
Last Updated 15 ಜುಲೈ 2013, 19:59 IST

ಲಂಡನ್ (ಪಿಟಿಐ): ಕೊಲ್ಲಿ ರಾಷ್ಟ್ರಗಳಲ್ಲಿ ಮನೆಗೆಲಸದ ಹೆಸರಿನಲ್ಲಿ ಜೀತ ಮಾಡುತ್ತಿರುವ ದಕ್ಷಿಣ ಏಷ್ಯಾದ ಸುಮಾರು ಒಂದು ಲಕ್ಷ ಮಹಿಳೆಯರನ್ನು ರಕ್ಷಿಸಲು ಬ್ರಿಟನ್ ಸರ್ಕಾರ ನೂತನ ಯೋಜನೆ ಹಾಕಿಕೊಂಡಿದೆ.

ಭಾರತ, ನೇಪಾಳ, ಬಾಂಗ್ಲಾದೇಶ ಸೇರಿದಂತೆ ದಕ್ಷಿಣ ಏಷ್ಯಾದಿಂದ ಕೊಲ್ಲಿ ರಾಷ್ಟ್ರಗಳಿಗೆ ತೆರಳಿ ಅಲ್ಲಿ ಜೀತ ಮಾಡುವ ಮಹಿಳೆಯರನ್ನು ರಕ್ಷಿಸಲು ಬ್ರಿಟನ್ ಸರ್ಕಾರ ಸುಮಾರು ರೂ 88 ಕೋಟಿ ( 97.5 ಲಕ್ಷ ಪೌಂಡ್ ) ಹೂಡಿಕೆ ಮಾಡಲು ನಿರ್ಧರಿಸಿದೆ.

`ಐದು ವರ್ಷ ಅವಧಿಯ ಈ ಯೋಜನೆ ಇಂಥ ಮಹಿಳೆಯರಿಗೆ ಆಶಾಕಿರಣವಾಗಲಿದೆ' ಎಂದು ಬ್ರಿಟನ್ ಸಚಿವರಾದ ಲೈನ್ ಫೆತರ್‌ಸ್ಟೋನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.