ADVERTISEMENT

ಲಾಡೆನ್ ಪತ್ನಿ ಬಿಡುಗಡೆಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ಲಂಡನ್ (ಪಿಟಿಐ): ಪಾಕ್‌ನಲ್ಲಿ ಬಂಧನದಲ್ಲಿರುವ ತನ್ನನ್ನು ಬಿಡುಗಡೆ ಮಾಡುವಂತೆ ಕೋರಿ ಒಸಾಮ ಬಿನ್ ಲಾಡೆನ್‌ನ ಹಿರಿಯ ಪತ್ನಿ ಅಲ್ಲಿನ ಮುಖ್ಯ ನ್ಯಾಯಮೂರ್ತಿ ಅವರಿಗೆ ಅರ್ಜಿ ನೀಡಿದ್ದಾರೆ.

ಲಾಡೆನ್‌ನ ಯೆಮನ್ ಮೂಲದ ಪತ್ನಿ ಅಮಲ್ ಅಹ್ಮೆದೆ ಅಲ್-ಸದಾಹ ಪರವಾಗಿ ಆಕೆಯ ಸಹೋದರ ಈ ಅರ್ಜಿ ಸಲ್ಲಿಸಿದ್ದು, ಅಬೋಟಾಬಾದ್‌ನಲ್ಲಿ ಲಾಡೆನ್ ವಿರುದ್ಧ ಅಮೆರಿಕ ನಡೆಸಿದ ಕಾರ್ಯಾಚರಣೆ ವೇಳೆ ಅವಳ ಮೊಳಕಾಲಿಗೆ ಗುಂಡು ತಾಗಿತ್ತು.

ಸಹೋದರಿಯ ಐವರು ಮಕ್ಕಳ ಮಾನಸಿಕ ಆರೋಗ್ಯ ಸರಿಯಿಲ್ಲ ಮತ್ತು ಶಿಕ್ಷಣ ಕೊಡಿಸಲು ಆಗುತ್ತಿಲ್ಲ ಎಂದು ಸಹೋದರ ಅರ್ಜಿಯಲ್ಲಿ ತಿಳಿಸಿದ್ದಾನೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.