ADVERTISEMENT

ವಿಜಯ್‌ ಮಲ್ಯ ಮೂರನೇ ಮದುವೆಯಾದ್ರಂತೇ?

ಏಜೆನ್ಸೀಸ್
Published 28 ಮಾರ್ಚ್ 2018, 19:03 IST
Last Updated 28 ಮಾರ್ಚ್ 2018, 19:03 IST
ವಿಜಯ್‌ ಮಲ್ಯ ಮೂರನೇ ಮದುವೆಯಾದ್ರಂತೇ?
ವಿಜಯ್‌ ಮಲ್ಯ ಮೂರನೇ ಮದುವೆಯಾದ್ರಂತೇ?   

ಲಂಡನ್‌: ಸಾವಿರಾರು ಕೋಟಿ ರೂಪಾಯಿ ಸಾಲ ಬಾಕಿ ಉಳಿಸಿಕೊಂಡು, ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಉದ್ಯಮಿ ವಿಜಯ್‌ ಮಲ್ಯ ಮೂರನೇ ಮದುವೆಯಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಇಂಗ್ಲಿಷ್‌ ಸುದ್ದಿವಾಹಿಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಮಲ್ಯ ಕಿಂಗ್‌ ಫಿಷರ್‌ ಏರ್‌ಲೈನ್ಸ್‌ನಲ್ಲಿ ಗಗನಸಖಿಯಾಗಿದ್ದ ಪಿಂಕಿ ಲಾಲ್‌ವಾನಿ ಅವರನ್ನು ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.  ಪಿಂಕಿ ಲಾಲ್‌ವಾನಿ ಮತ್ತು ವಿಜಯ್ ಮಲ್ಯ ಜತೆಗಿರುವ ಚಿತ್ರಗಳು ಕೂಡ ವೈರಲ್‌ ಆಗಿವೆ.

ಬ್ಯಾಂಕ್‌ಗಳಿಂದ 9000 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ಹಣವನ್ನು ಪಾವತಿಸದೆ ಲಂಡನ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ.  ಮಲ್ಯ ಮದುವೆಯಾಗಿರುವ ಬಗ್ಗೆ ಯಾವುದೇ ಖಚಿತ ಮಾಹಿತಿಗಳು ಲಭ್ಯವಾಗಿಲ್ಲ. ಈ ಬಗ್ಗೆ ಮಲ್ಯ ಅಥವಾ ಪಿಂಕಿ ಲಾಲ್‌ವಾನಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.