ADVERTISEMENT

ವಿಟ್ನಿಗೆ ಕಂಬನಿಯ ವಿದಾಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

ನೇವಾರ್ಕ್ (ಪಿಟಿಐ): ನಿಗೂಢವಾಗಿ ಸಾವನ್ನಪ್ಪಿದ ಪ್ರಖ್ಯಾತ ಗಾಯಕಿ ವಿಟ್ನಿ ಹ್ಯೂಸ್ಟನ್ ಪಾರ್ಥಿವ ಶರೀರದ ಅಂತ್ಯಕ್ರಿಯೆ ಬಂಧುಗಳು, ಸ್ನೇಹಿತರು ಮತ್ತು ಸಹಸ್ರಾರು ಅಭಿಮನಿಗಳ ಕಂಬನಿಯ ನಡುವೆ ಅವರ ಹುಟ್ಟೂರಾದ  ಇಲ್ಲಿ ಭಾನುವಾರ ನಡೆಯಿತು.

ಪಟ್ಟಣದ ನ್ಯೂ ಹೋಪ್ ಬ್ಯಾಪ್ಟಿಸ್ಟ್ ಚರ್ಚ್‌ನಲ್ಲಿ ಕ್ರೈಸ್ತ ಧರ್ಮದ ಅನುಸಾರ ಅಂತ್ಯಕ್ರಿಯೆಯ ವಿಧಿ- ವಿಧಾನಗಳು ನಾಲ್ಕು ತಾಸುಗಳ ಕಾಲ ನಡೆದವು. ಈ ಸಂದರ್ಭದಲ್ಲಿ ವಿಟ್ನಿ ಅವರನ್ನು ಗುಣಗಾನ ಮಾಡಲಾಯಿತು. ಇದೇ ಚರ್ಚ್‌ನಲ್ಲಿ ವಿಟ್ನಿ ಕ್ರೈಸ್ತ ಭಕ್ತಿಗಳನ್ನು ಹಾಡುತ್ತಿದ್ದರು.

ನೆವಾರ್ಕ್ ಪಟ್ಟಣದ ದಕ್ಷಿಣದಲ್ಲಿರುವ ವೆಸ್ಟ್‌ಫೀಲ್ಡ್‌ನ ಫೇರ್‌ವ್ಯೆ ಸ್ಮಶಾನದಲ್ಲಿ, ವಿಟ್ನಿ ತಂದೆಯವರ ಸಮಾಧಿ ಪಕ್ಕದಲ್ಲೇ ಅವರ ಪಾರ್ಥಿವ ಶರೀರವನ್ನೂ ಸಮಾಧಿ ಮಾಡಲಾಯಿತು.

1,500 ಮಂದಿಗೆ ಮಾತ್ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದಕ್ಕೆ ಅವ ಕಾಶ ನೀಡಲು ಉದ್ದೇಶಿಸ ಲಾಗಿತ್ತು. ಆದರೆ ಅಧಿಕ ಸಂಖ್ಯೆಯಲ್ಲಿ ವಿಟ್ನಿ ಅವರ ಅಭಿಮಾನಿಗಳು ಚರ್ಚ್ ಮತ್ತು ಸ್ಮಶಾನದ ಹೊರಗೆ ಜಮಾಯಿಸಿದ್ದರು. ಅನೇಕರು ಅಂತರ್ಜಾಲದಲ್ಲಿ ನೇರ ಪ್ರಸಾರದ್ಲ್ಲಲಿ ವಿಟ್ನಿ ಅಂತ್ಯಕ್ರಿಯೆ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.