ADVERTISEMENT

ವಿಮಾನ ಅಪಘಾತ: ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:30 IST
Last Updated 23 ಸೆಪ್ಟೆಂಬರ್ 2011, 19:30 IST

ಎಲ್ಲೋನೈಫ್ (ಕೆನಡ) (ಎಪಿ): ತೇಲುವ ವಿಮಾನವೊಂದು ಉತ್ತರ ಕೆನಡಾದ ಎಲ್ಲೋನೈಫ್‌ನ ರಸ್ತೆಯೊಂದರ ಎರಡು ಕಟ್ಟಡಗಳ ನಡುವೆ ನೆಲಕ್ಕೆ ಅಪ್ಪಳಿಸಿದ್ದರಿಂದ ಇಬ್ಬರು ಮೃತಪಟ್ಟಿದ್ದು ಏಳು ಮಂದಿ ಗಾಯಗೊಂಡಿದ್ದಾರೆ.

ವಿಮಾನ ಮೇಲಕ್ಕೆ ಹಾರುತ್ತಿತ್ತೋ ಅಥವಾ ಗ್ರೇಟ್ ಸ್ಲೇವ್ ಸರೋವರದ ಮೇಲೆ ಇಳಿಯಲು ಬರುತ್ತಿತ್ತೋ ಖಚಿತವಾಗಿ ಗೊತ್ತಿಲ್ಲ ಎಂದು ರಾಯಲ್ ಕೆನಡಿಯನ್ ಅಶ್ವಾರೋಹಿ ಪೊಲೀಸ್  ಕ್ಯಾಥಿ ಲಾ ಗುರುವಾರ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.