ADVERTISEMENT

ವಿಮಾನ ಅಪಹರಣದ ಶಂಕೆ

8ನೇ ದಿನವೂ ಮುಂದುವರಿದ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 19:30 IST
Last Updated 15 ಮಾರ್ಚ್ 2014, 19:30 IST

ಕ್ವಾಲಾಲಂಪುರ (ಪಿಟಿಐ): ಎಂಟು ದಿನಗಳ ಹಿಂದೆ ನಿಗೂಢವಾಗಿ ಕಣ್ಮರೆಯಾದ ವಿಮಾನ ‘ಅಪಹರಣ­ವಾಗಿ­ರ­ಬಹುದು’ ಎಂದು ಮಲೇಷ್ಯಾ ಅನುಮಾನ ವ್ಯಕ್ತಪಡಿಸಿದೆ.

‘ಈ ವಿಷಯದಲ್ಲಿ ವ್ಯವಸ್ಥಿತ ಪಿತೂರಿ ನಡೆ­ದಿದೆ. ಸಂವ­ಹನ ವ್ಯವಸ್ಥೆ­ಯನ್ನು ಉದ್ದೇಶ ಪೂರ್ವಕವಾಗಿಯೇ ನಿಷ್ಕ್ರಿ­ಯ­­ಗೊಳಿಸ­ಲಾಗಿದೆ’ ಎಂದು ಅದು ದೂರಿದೆ.

ಪ್ರಧಾನಿ ಸುದ್ದಿಗೋಷ್ಠಿ: ವಿಮಾನ ಕಣ್ಮರೆಯ ನಂತರ ಇದೇ ಮೊದಲ ಬಾರಿಗೆ ಶನಿವಾರ ಪತ್ರಿಕಾ­ಗೋ­ಷ್ಠಿ­ಯಲ್ಲಿ ಮಾತನಾಡಿದ ಮಲೇಷ್ಯಾ ಪ್ರಧಾನಿ ನಜೀಬ್‌ ರಜಾಕ್‌, ‘ವಿಮಾನದ ಬಗ್ಗೆ ಕಡೆಯ ಬಾರಿಗೆ ಉಪಗ್ರಹ ಮಾಹಿತಿ ಕಳೆದ ಶನಿವಾರ (ಮಾರ್ಚ್‌ 8) ಸ್ಥಳೀಯ ಕಾಲಮಾನ ಬೆಳಿಗ್ಗೆ 8.11ಕ್ಕೆ ದಾಖಲಾಗಿದೆ. ಇದನ್ನು ಗಮನಿ­ಸಿದರೆ, ವಿಮಾನವು ರೆಡಾರ್‌ ಸಂಪರ್ಕ­ದಿಂದ ತಪ್ಪಿಸಿಕೊಂಡ ನಂತರ ಸುಮಾರು ಏಳೂವರೆ ತಾಸುಗಳ ಕಾಲ ಹಾರಾಟ ನಡೆಸಿದೆ’ ಎಂದರು.

‘ವಿಮಾನವು ಮಲೇಷ್ಯಾ ಮತ್ತು ವಿಯೆಟ್ನಾಂ ಗಡಿಯ ವಾಯು ಸಂಚಾರ ನಿಯಂತ್ರಣ ಕೇಂದ್ರ­ಗಳ ಮಧ್ಯೆ ಸಂಚರಿಸು­ತ್ತಿದ್ದಾಗ ಸ್ವಯಂ­ಚಾಲಿತ ರೇಡಿಯೊ ಸಂಜ್ಞೆಗಳನ್ನು ಗ್ರಹಿಸಿ ಅದಕ್ಕೆ ಪ್ರತಿಕ್ರಿಯಿ­ಸುವ ಸಾಧನ (ಟ್ರಾನ್ಸ್‌­ಪಾಂಡರ್‌) ನಿಷ್ಕ್ರಿಯ­ಗೊಂಡಿವೆ’ ಎಂದು ಶಂಕೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.