ಲಂಡನ್ (ಪಿಟಿಐ): ಸ್ಪೇನ್ನ ಬಾರ್ಸಿಲೋನಾದಲ್ಲಿ ಇತ್ತೀಚೆಗೆ ನಡೆದ ವಿಶ್ವ ಉಕ್ಕು ಸಾಮ್ರಾಜ್ಯದ ಅಧಿಪತಿ ಲಕ್ಷ್ಮಿ ಎನ್. ಮಿತ್ತಲ್ ಸಹೋದರನ ಪುತ್ರಿಯ 500 ಕೋಟಿ ರೂಪಾಯಿ ವೆಚ್ಚದ ವೈಭವೋಪೇತ ವಿವಾಹ ವಿವಾದ ಹುಟ್ಟು ಹಾಕಿದೆ.
ಲಕ್ಷ್ಮಿ ಮಿತ್ತಲ್ ಕಿರಿಯ ಸಹೋದರ ಪ್ರಮೋದ್ ಮಿತ್ತಲ್ ಅವರ ಪುತ್ರಿ ಸೃಷ್ಟಿ ಅವರ ಮದುವೆ ಲಂಡನ್ ಮೂಲದ ಗುಲ್ರಾಜ್ ಬೆಹ್ಲ್ ಜೊತೆ ಬಾರ್ಸಿಲೋನಾದ ರಾಷ್ಟ್ರೀಯ ವಸ್ತು ಸಂಗ್ರಹಾಲಯ ಆವರಣದಲ್ಲಿ ಮೂರು ದಿನ ಅದ್ದೂರಿಯಿಂದ ನೆರವೇರಿತ್ತು.
ವಿಶ್ವದ ವೈಭವೋಪೇತ ಮದುವೆಗಳಲ್ಲಿ ಐದನೇ ಸ್ಥಾನ ಪಡೆದ ಈ ಮದುವೆ ಯಂದು ಕಟಲಾನ್ ಕಲಾ ಸಂಗ್ರಹಾಲಯಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.
ಸೋಷಿಯಲಿಸ್ಟ್ ಪಕ್ಷದ ನಾಯಕ ಜೋರ್ಡಿ ಮಾರ್ಟಿ, ಖಾಸಗಿ ಸಮಾರಂಭಕ್ಕಾಗಿ ಸಾರ್ವಜನಿಕ ಸ್ಥಳವನ್ನು ಬಾಡಿಗೆ ನೀಡಿದ ನಗರ ಪಾಲಿಕೆ ಕ್ರಮವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಮದುವೆಗೆ ಸ್ಥಳ ನೀಡಿರುವುದನ್ನು ಮೇಯರ್ ಕ್ಸೇವಿಯರ್ ಟ್ರಯಾಸ್ ಸಮರ್ಥಿಸಿಕೊಂಡಿದ್ದಾರೆ. ಆರ್ಥಿಕ ಹಿಂಜರಿತದ ದಿನದಲ್ಲಿ ಬಾಡಿಗೆ ನೀಡಿರುವುದು ಸರಿ ಎಂದಿದ್ದಾರೆ.
ಬಾರ್ಸಿಲೋನಾವೇ ಏಕೆ?: ಬಾರ್ಸಿ ಲೋನಾ ಮತ್ತು ಅಂಟೋನಿ ಗೌಡಿ ಅವರ ಕಟಲಾನ ಕಲೆಯಿಂದ ಪ್ರಭಾವಿತರಾಗಿ ಪ್ರಮೋದ್ ಮಗಳ ಮದುವೆಗೆ ಈ ಸ್ಥಳ ಆಯ್ಕೆ ಮಾಡಿದ್ದರು.
ದುಬಾರಿ ಮದುವೆ: ಫೋಬ್ಸ್ ಪ್ರಕಾರ 1981ರಲ್ಲಿ ನಡೆದ ಅಬುಧಾಬಿಯ ರಾಜ ಮೊಹಮ್ಮದ್ ಜಾಯೇದ್ – ಸಲ್ಮಾ ಮದುವೆ ವಿಶ್ವದ ದುಬಾರಿ ವಿವಾಹದ ಮೊದಲ ಸ್ಥಾನದಲ್ಲಿದೆ. ಮದುವೆಗಾಗಿ ಆ ದಿನಗಳಲ್ಲಿಯೇ 643 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು.
ಅದ್ದೂರಿ ಮದುವೆಯ ಖಯಾಲಿ...!
ಮಿತ್ತಲ್ ಕುಟುಂಬ ಅದ್ದೂರಿ ಮದುವೆಗಳಿಗೆ ಹೆಸರಾಗಿದೆ. ಇದುವರೆಗೂ ಮಿತ್ತಲ್ ಕುಟುಂಬದಲ್ಲಿ ನಡೆದಿರುವ ಮದುವೆಗಳಿಗೆ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿದೆ.
2004ರಲ್ಲಿ ನಡೆದ ಲಕ್ಷ್ಮಿ ಮಿತ್ತಲ್ ಅವರ ಪುತ್ರಿ ವನಿಷಾ ಮತ್ತು ಕೋಟ್ಯಧೀಶ ಉದ್ಯಮಿ ಅಮಿತ್ ಭಾಟಿಯಾ ಮದುವೆಗೆ 243 ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತು.
1998ರಲ್ಲಿ ಕೋಲ್ಕತ್ತದ ಐತಿಹಾಸಿಕ ವಿಕ್ಟೋರಿಯಾ ಮೆಮೋರಿಯಲ್ನಲ್ಲಿ ನಡೆದ ಪುತ್ರ ಆದಿತ್ಯ ವಿವಾಹಕ್ಕೆ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತು. ಈಗ ಮೂರು ದಿನಗಳ ಕಾಲ ನಡೆದ ಸೃಷ್ಟಿ ಮದುವೆ ವಿಶ್ವದ ಐದನೇ ದುಬಾರಿ ಮದುವೆ ಎಂಬ ದಾಖಲೆ ಬರೆದಿದೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.