ಲಂಡನ್ (ಪಿಟಿಐ): ಜಗತ್ತಿನ ಅತ್ಯಂತ ಹಳೆಯ, 1947ರ ಟ್ಯುರಿನ್ ಗ್ರ್ಯಾನ್ ಪ್ರಿನಲ್ಲಿ ಜಯಶಾಲಿಯಾಗಿದ್ದ ಫೆರಾರಿ ಕಾರನ್ನು ದುರಸ್ತಿಗೊಳಿಸಿದ ಬಳಿಕ ಮೊದಲ ಬಾರಿಗೆ ಪ್ರದರ್ಶನಕ್ಕೆ ಇಡಲಾಗಿದೆ.
ಈ ಫೆರಾರಿ ಬೆಲೆ 80 ಲಕ್ಷ ಡಾಲರ್ (ಸುಮಾರು 44 ಕೋಟಿ ರೂಪಾಯಿ) ಎಂದು ಅಂದಾಜಿಸಲಾಗಿದೆ. ಎಂಜೊ ಫೆರಾರಿ ಕಂಪೆನಿ ತಯಾರಿಸಿರುವ 166-ಸ್ಪೈಡರ್ ಕೋರ್ಸಾ ಕಾರನ್ನು ಎರಡನೇ ಮಹಾಯುದ್ಧದ ನಂತರ ತಯಾರಿಸಲಾಗಿದೆ. ಕ್ಯಾಲಿಫೋರ್ನಿಯಾದ ನಿವಾಸಿ ಜಿಮ್ ಗ್ಲಿಕೆನ್ಹಾಸ್ ಎಂಬುವರ ಬಳಿ ಇದ್ದ ಈ ಕಾರನ್ನು 5 ಲಕ್ಷ ಡಾಲರ್‌ಗೆ ಖರೀದಿಸಲಾಗಿದೆ ಎಂದು `ಡೈಲಿ ಮೇಲ್~ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.