ADVERTISEMENT

ವಿಶ್ವಸಂಸ್ಥೆಯಲ್ಲಿ ಸೂಫಿ ಝಲಕ್

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2012, 21:51 IST
Last Updated 27 ನವೆಂಬರ್ 2012, 21:51 IST

ವಿಶ್ವಸಂಸ್ಥೆ (ಪಿಟಿಐ): ಮುಂಬೈನಲ್ಲಿ  26/11ರ ಉಗ್ರರ ದಾಳಿಯಲ್ಲಿ ಮಡಿದವರ ಸ್ಮರಣಾರ್ಥ ಭಾರತವು ಸೋಮವಾರ ವಿಶ್ವಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅನುರಣಿಸಿದ `ಸೂಫಿ ಸಂಗೀತ' ಎಲ್ಲರ ಮನ ಸೂರೆಗೊಂಡಿತು.

ಕರಾಳ ಘಟನೆಯ ನಾಲ್ಕನೇ ವಾರ್ಷಿಕೋತ್ಸವದಂದು `ಎಲ್ಲರೆಡೆಗೆ ಪ್ರೀತಿಯ ಹೂಮಳೆ; ದ್ವೇಷ ಬೇಡ ಯಾರೆಡೆ' ಎಂಬ ಧ್ಯೇಯ ವಾಕ್ಯದೊಂದಿಗೆ ಆರಂಭವಾದ ಸಂಗೀತ ಕಛೇರಿಯು  ಮಾನವೀಯತೆ, ಪ್ರೀತಿ, ಶಾಂತಿ, ತಾಳ್ಮೆ, ಬಹುಸಂಸ್ಕೃತಿಯ ಸಂದೇಶ ಸಾರಿತು.

ವಿಶೇಷ ಆಹ್ವಾನಿತರಾಗಿದ್ದ ಅಜ್ಮೀರದ ಶಾಹಿ ಸೂಫಿ  ಸಂಗೀತಗಾರರ ತಂಡ ಕವ್ವಾಲಿ ಪ್ರಸ್ತುತಪಡಿಸಿತು. ವಿಶ್ವಸಂಸ್ಥೆಯ ಸಿಂಫೋನಿ ಆರ್ಕೆಸ್ಟ್ರಾ ಕೂಡ ಕಾರ್ಯಕ್ರಮಕ್ಕೆ ಕಳೆ ಕಟ್ಟಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.