ADVERTISEMENT

ವೀಸಾ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

​ಪ್ರಜಾವಾಣಿ ವಾರ್ತೆ
Published 4 ಜುಲೈ 2017, 19:30 IST
Last Updated 4 ಜುಲೈ 2017, 19:30 IST
ವೀಸಾ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
ವೀಸಾ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು   

ಪ್ರ: ನನ್ನ ಬಳಿ ಪಾಸ್‌ಪೋರ್ಟ್‌ ಇದೆ. ಅಮೆರಿಕ ವೀಸಾ ಪಡೆಯಲು ಉತ್ಸುಕನಾಗಿದ್ದೇನೆ. ವೀಸಾಕ್ಕೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು? ಎಲ್ಲಿ ಅರ್ಜಿ ಸಲ್ಲಿಸಬೇಕು?
–ಎನ್‌.ಜಿ. ರಾಜಪೂರ, ಮುಧೋಳ

ಉ: ವೀಸಾ ಪಡೆಯುವ ಪ್ರಕ್ರಿಯೆಯ ಮೊದಲಹಂತ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು. ಅದಾದ ಬಳಿಕ ವೀಸಾ ಅರ್ಜಿ ಕೇಂದ್ರಕ್ಕೆ ಭೇಟಿ ನೀಡಿ ಆನಂತರ ದೂತಾವಾಸ ಕಚೇರಿಗೆ ಸಂದರ್ಶನಕ್ಕೆ ಬರಬೇಕು. ಸಂದರ್ಶನದ ಅವಧಿ ನಿಗದಿ ಪಡಿಸುವಾಗ ಭಾರತದ ಐದು ದೂತಾವಾಸ ಕಚೇರಿಗಳಲ್ಲಿ ಯಾವುದಾದರೂ ಒಂದರಲ್ಲಿ ನಿಮಗೆ ಅನುಕೂಲಕರ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಬಗೆಗಿನ ಸಮಗ್ರ ಮಾಹಿತಿಯನ್ನು ಪಡೆಯಲು ದಯವಿಟ್ಟು www.ustraveldocs.com/in ಭೇಟಿ ನೀಡಿ.

ಪ್ರ: ನನಗೆ 10 ವರ್ಷಗಳ B1/B2 ವೀಸಾ ನೀಡಲಾಗಿದ್ದು ಮೇ 2019ಕ್ಕೆ ಅದರ ಅವಧಿ ಮುಗಿಯಲಿದೆ. ವೀಸಾ ನವೀಕರಿಸಲು ಚೆನ್ನೈನಲ್ಲಿರುವ ಅಮೆರಿಕ ದೂತಾವಾಸ ಕಚೇರಿಗೆ ಹೋಗಬೇಕೆ ಅಥವಾ ನಾನು ಹಿರಿಯ ನಾಗರಿಕನಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಅವರ ಕಚೇರಿಯ ಡ್ರಾಪ್‌ಬಾಕ್ಸ್‌ನಲ್ಲಿ ನನ್ನ ಪಾಸ್‌ಪೋರ್ಟ್‌ ಹಾಕಬಹುದೇ? ದಯವಿಟ್ಟು ತಿಳಿಸಿ.
ಉ: ನಿರ್ದಿಷ್ಟ ಮಾನದಂಡಗಳನ್ನು ಪೂರೈಸುವ ಅರ್ಜಿದಾರರಿಗೆ ಸಂದರ್ಶನ ವಿನಾಯಿತಿ ನೀಡಲಾಗುತ್ತದೆ. ನೀವು ಆ ಎಲ್ಲಾ ಮಾನದಂಡಗಳನ್ನು ಪೂರೈಸುವುದಾದರೆ ನೀವು ಸಂದರ್ಶನಕ್ಕೆ ಬರುವ ಅಗತ್ಯವಿಲ್ಲ. ಈ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಈ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ http://www. ustraveldocs.com/in/in-niv-visarenew.asp. ಅಮೆರಿಕದ ಕಾನೂನಿನ ಪ್ರಕಾರ 79  ವರ್ಷ ಅಥವಾ ಅದಕ್ಕೂ ಹೆಚ್ಚು ವಯಸ್ಸಾದವರಿಗೆ ಮಾತ್ರ ಫಿಂಗರ್‌ ಪ್ರಿಂಟ್ಸ್‌ಗೆ ಹಾಜರಾಗಲು ವಿನಾಯಿತಿ ನೀಡಲಾಗುತ್ತದೆ.

ಪ್ರ: ಅಮೆರಿಕದಿಂದ ಹಿಂತಿರುಗಿದ ಮೇಲೆ ಮತ್ತೆ ಅಮೆರಿಕಕ್ಕೆ ತೆರಳಲು ಕನಿಷ್ಠ ಆರು ತಿಂಗಳ ಕಾಲಾವಕಾಶ ಬೇಕು ಎಂಬ ನಿಯಮವಿದೆಯೇ? ಇಲ್ಲ ಎಂದಾದರೆ ಯಾವ ನಿಯಮವಿದೆ ತಿಳಿಸಿ.
ಬಿ.ಸಿ. ಶೇಷಾದ್ರಿ
ಉ:
ಶೇಷಾದ್ರಿ ಅವರೇ, ಅಮೆರಿಕಕ್ಕೆ ಮತ್ತೊಮ್ಮೆ ಭೇಟಿ ಕೊಡುವ ಮೊದಲು ಭಾರತದಲ್ಲಿ ಕನಿಷ್ಠ ಇಂತಿಷ್ಟು ದಿನ ಇರಬೇಕು ಎಂಬ ನಿಯಮವೇನಿಲ್ಲ. ಆದರೆ ಭಾರತವೇ ನಿಮ್ಮ ಮೂಲ ವಸತಿ ಪ್ರದೇಶ ಎಂಬುದನ್ನು ಸಾಬೀತು ಪಡಿಸಬೇಕಷ್ಟೆ. ಅಮೆರಿಕಕ್ಕೆ ಪದೇಪದೇ ಭೇಟಿ ನೀಡಲು ಕಾರಣಗಳೇನು ಎಂಬುದನ್ನು ಇಮಿಗ್ರೆಷನ್‌ ಅಧಿಕಾರಿಗೆ ಮನವರಿಕೆ ಮಾಡಿಕೊಡಿ. B1/B2 ಒಂದು ಪ್ರವಾಸಿ ವೀಸಾ, ಅದು ಇಮಿಗ್ರೆಂಟ್‌ ವೀಸಾ ಅಲ್ಲ. ಅಮೆರಿಕದೊಳಕ್ಕೆ ಪ್ರವೇಶಿಸಲು ಅನುಮತಿ ನೀಡಬೇಕೇ ಬೇಡವೇ ಎಂಬುದನ್ನು ನಿರ್ಧರಿಸುವುದು ಡಿಪಾರ್ಟ್‌ಮೆಂಟ್‌ ಆಫ್‌ ಹೋಮ್‌ ಲ್ಯಾಂಡ್‌ ಸೆಕ್ಯುರಿಟಿಯ ಪೋರ್ಟ್‌ ಆಫ್‌ ಎಂಟ್ರಿ ನಿರ್ಧರಿಸುತ್ತದೆ. ವೀಸಾ ಇದ್ದ ಮಾತ್ರಕ್ಕೆ ಪ್ರವೇಶ ಗ್ಯಾರಂಟಿ ಏನಿಲ್ಲ.

ADVERTISEMENT

ಪ್ರ: ಅಮೆರಿಕ ವೀಸಾಗೆ ಭದ್ರತಾ ಠೇವಣಿ ಇಡಬೇಕೆ?
-ವಿನಯ್‌ ಹಾಸ್ಯಗಾರ್‌
ಉ:
ವಿನಯ್‌ ಹಾಸ್ಯಗಾರ್‌ ಅವರೇ, ಅಮೆರಿಕ ವೀಸಾ ಪಡೆಯಲು ಭದ್ರತಾ ಠೇವಣಿಯ ಅಗತ್ಯವಿಲ್ಲ. ನೀವು ನಿಗದಿ ಪಡಿಸಿದ ವೀಸಾ ಶುಲ್ಕ ಪಾವತಿಸಿ ಸಂದರ್ಶನದ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಬೇಕಷ್ಟೆ. ಈ ಬಗೆಗಿನ ಮಾಹಿತಿಗಾಗಿ  www.ustraveldocs. com/in ಈ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.  

ಪ್ರ: ನಾನೊಬ್ಬ ಸರ್ಕಾರಿ ನೌಕರ. ಟೆಕ್ಸಾಸ್‌ನಲ್ಲಿ ವಾಸವಿರುವ ನನ್ನ ಸಂಬಂಧಿಯೊಬ್ಬರು ಅಲ್ಲಿಗೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ. ನಾನು ವೀಸಾ ನೀಡುವಂತೆ ಮನವಿ ಮಾಡಿ ಅರ್ಜಿ ಸಲ್ಲಿಸಿ, ಸಂದರ್ಶನಕ್ಕೂ ಹಾಜರಾಗಿದ್ದೆ. ಸೆಕ್ಷನ್‌ 214(b) ಆಧರಿಸಿ ವೀಸಾ ನಿರಾಕರಿಸಲಾಗಿದೆ. ವೀಸಾ ನಿರಾಕರಣೆಗೆ ಕಾರಣಗಳೇನು ಎಂಬುದನ್ನು ತಿಳಿಯಬೇಕಾಗಿದೆ.
-ನೀಲಕಂಠ ರಾಜಪುರ
: ಈ ಅಂಕಣದಲ್ಲಿ ನಾವು ಬಿಡಿ ಪ್ರಕರಣಗಳ ಮಾಹಿತಿ ನೀಡುವುದು ಸಾಧ್ಯವಾಗುತ್ತಿಲ್ಲ. ಆದರೆ ವೀಸಾ ಪಡೆಯಲು ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ದೇಶದೊಂದಿಗಿನ ಸಂಬಂಧವನ್ನು ಅನುಮಾನಕ್ಕೆಡೆ ಇಲ್ಲದಂತೆ ಸಾಬೀತು ಪಡಿಸಬೇಕು. ಅಲ್ಲದೆ ವೀಸಾದ ಎಲ್ಲ ನಿಯಮಗಳನ್ನೂ ಪಾಲಿಸುವುದಾಗಿ ಸಂದರ್ಶಿಸುವ ಅಧಿಕಾರಿಗೆ ಮನದಟ್ಟು ಮಾಡಿಕೊಡಬೇಕು. 214(b) ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಈ ತಾಣಕ್ಕೆ ಭೇಟಿ ಕೊಡಿ. travel.state.gov/ content/visas/en/general/denials.html.

***

ವೀಸಾ ವಿಚಾರ: ಭಾರತ–ಅಮೆರಿಕ ನಡುವಣ  ಸಹಭಾಗಿತ್ವ ಮತ್ತು ಜನರ ನಡುವಣ ಸಂಬಂಧ ದಿನೇ ದಿನೇ ಉತ್ತಮಗೊಳ್ಳುತ್ತಿದೆ.  ಹಾಗೆಯೇ ಅಮೆರಿಕ ವೀಸಾಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಅಮೆರಿಕ ವೀಸಾಗೆ ಅರ್ಜಿ ಸಲ್ಲಿಸುವ ವಿಧಾನ, ಸಂದರ್ಶನ ಪ್ರಕ್ರಿಯೆ ಇತ್ಯಾದಿಗಳ ಬಗ್ಗೆ ‘ಪ್ರಜಾವಾಣಿ’ ಓದುಗರಿಗೆ ಚೆನ್ನೈನ ಅಮೆರಿಕ ದೂತಾವಾಸ ಮಾಹಿತಿ ನೀಡಲಿದೆ. ತಿಂಗಳಿಗೊಮ್ಮೆ ಈ ಅಂಕಣ ಪ್ರಕಟವಾಗಲಿದೆ.

ಓದುಗರು ಪ್ರಶ್ನೆಗಳನ್ನು ಈ ವಿಳಾಸಕ್ಕೆ ಕಳುಹಿಸಬಹುದು. gendesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.