ADVERTISEMENT

ವೀಸಾ ವಿಳಂಬ: ಒಬಾಮ ಮಧ್ಯಪ್ರವೇಶಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2012, 19:30 IST
Last Updated 24 ಮಾರ್ಚ್ 2012, 19:30 IST

ವಾಷಿಂಗ್ಟನ್ (ಪಿಟಿಐ): ಎಲ್1 ಉದ್ಯೋಗ ವೀಸಾ ವಿಳಂಬದಿಂದ ಉಂಟಾಗಿರುವ ಸಮಸ್ಯೆ ಬಗೆಹರಿಸಬೇಕೆಂದು ಕೋರಿ ಭಾರತ ಹಾಗೂ ಅಮೆರಿಕದ ಐಟಿ ಕಂಪೆನಿಗಳು ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಪತ್ರ ಬರೆದಿವೆ.

`ಉದ್ಯೋಗಿಗಳನ್ನು ವಿದೇಶಗಳಿಂದ ಅಮೆರಿಕದ ಕಚೇರಿಗೆ ವರ್ಗಾವಣೆ ಮಾಡಿಕೊಳ್ಳುವ ಸಲುವಾಗಿ  `ಎಲ್1 ವೀಸಾ ಅರ್ಜಿಗಳನ್ನು ನಿರಾಕರಿಸುವ ಮೂಲಕ ವಲಸೆ ಅಧಿಕಾರಿಗಳು ಕಾನೂನಿನ ಎಲ್ಲೆ ಮೀರ್ದ್ದಿದಾರೆ.  ವೀಸಾ ವಿಳಂಬದಿಂದ ಕಂಪೆನಿಗಳ ವ್ಯವಹಾರಗಳು ಹಾಗೂ ಅಮೆರಿಕದ ಆರ್ಥಿಕ ವ್ಯವಸ್ಥೆಯ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ~ ಎಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.