ADVERTISEMENT

ವೈಪರ್‌ಗೆ ಪರ್ಯಾಯ ತಂತ್ರಜ್ಞಾನ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST

ಲಂಡನ್‌ (ಪಿಟಿಐ): ವಾಹನಗಳ ಎದುರಿನ ಗಾಜಿನ ಮೇಲೆ ಕುಳಿತಿರುವ ನೀರು ಅಥವಾ ದೂಳನ್ನು ತೆಗೆಯಲು ಬಳಸುವ ವೈಪರ್‌ಗೆ ಪರ್ಯಾಯವಾಗಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ವೈಪರ್‌ ಬದಲಾಗಿ ಕಂಪನ (ವೈಬ್ರೇಷನ್‌) ವ್ಯವಸ್ಥೆಯನ್ನು ತಜ್ಞರು ಅಭಿವೃದ್ಧಿ ಪಡಿಸುತ್ತಿದ್ದಾರೆ.

ಬ್ರಿಟನ್ನಿನ ಅತ್ಯಾಧುನಿಕ ವಾಹನ ತಯಾರಿಕಾ ಸಂಸ್ಥೆ ಹಾಗೂ ಫಾರ್ಮುಲಾ–1 ಕಾರುಗಳ ತಯಾರಿಕಾ ಕಂಪೆನಿಯಾದ ಮೆಕ್‌­ಲಾರೆನ್‌ ಸಮೂಹವು ಯುದ್ಧವಿಮಾನ­ಗಳಲ್ಲಿ ಬಳಸುತ್ತಿರುವ ತಂತ್ರಜ್ಞಾನ ಬಳಸಿಕೊಂಡು ವೈಪರ್‌ ಬಳಕೆ ಕೊನೆ­ಗೊಳಿಸಲು ಯೋಜನೆ ಹಾಕಿಕೊಂಡಿದೆ. ಹೆಚ್ಚು ಆವರ್ತನದ (ಫ್ರೀಕ್ವೆನ್ಸಿ) ಶಬ್ದದ ತರಂಗಾಂತರವನ್ನು ಹೊಸ ತಂತ್ರಜ್ಞಾನ ಬಳಸಿಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.